ADVERTISEMENT

ಇ.ಡಿ ನಡೆಸಿರುವ ಎಲ್ಲ ದಾಳಿಗಳಲ್ಲಿ ಶೇ 0.1 ರಷ್ಟೂ ಗುರಿ ಮುಟ್ಟಿಲ್ಲ: ಸಂತೋಷ್ ಲಾಡ್

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 14:04 IST
Last Updated 21 ಜುಲೈ 2025, 14:04 IST
<div class="paragraphs"><p>ಸಂತೋಷ್ ಲಾಡ್</p></div>

ಸಂತೋಷ್ ಲಾಡ್

   

ಧಾರವಾಡ: ‘ಜಾರಿ ನಿರ್ದೇಶನಾಲಯವು (ಇ.ಡಿ) ಈವರೆಗೆ ನಾಲ್ಕು ಸಾವಿರಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದ್ದು, ಈ ಪೈಕಿ ಶೇ 95ರಷ್ಟುವಿರೋಧ ಪಕ್ಷಗಳವರ ಮೇಲೆ ನಡೆದಿವೆ. ಇ.ಡಿ ಯಶಸ್ಸಿನ ಪ್ರಮಾಣ ಶೇ 0.1ರಷ್ಟೂ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಪ್ರತಿಕ್ರಿಯಿಸಿದರು.

ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಸಿ.ಎಂ ಸಿದ್ದರಾಮಯ್ಯ ಪತ್ನಿ ವಿರುದ್ಧ ತನಿಖೆ ನಡೆಸಲು ಇ.ಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿ‌ರುವ ಕುರಿತು

ADVERTISEMENT

ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾನಸಿಕವಾಗಿ ತೊಂದರೆ ಕೊಡಲಾಯಿತು. ಬಿಜೆಪಿಯವರು ಇ.ಡಿ, ಐ.ಟಿ, ‘ಫೆಮಾ’ ಮೊದಲಾದವನ್ನು ಕಳೆದ 11 ವರ್ಷಗಳಿಂದ ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದಾರೆ’ ಎಂದು ದೂರಿದರು.

‘ಈಚೆಗೆ ಮುಂಬೈನಲ್ಲಿ ಇ.ಡಿ ಕಚೇರಿಯಲ್ಲಿ ಬೆಂಕಿ ಹೊತ್ತಿತ್ತು. ₹ 35 ಸಾವಿರ ಕೋಟಿ ವಂಚನೆ ಪ್ರಕರಣ ಎದುರಿಸುತ್ತಿದ್ದವರ ಫೈಲುಗಳು ಈ ಅವಘಡದಲ್ಲಿ ನಾಶವಾಗಿವೆ. ಐ.ಟಿ, ‘ಫೆಮಾ’, ‘ಫೆರಾ’, ಸಿಬಿಐ ದಾಳಿ ನಡೆದಿದ್ದ, ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಕಾಂಗ್ರೆಸ್‌ನ ಸುಮಾರು 25 ನಾಯಕರು ಬಿಜೆಪಿ ಸೇರಿದ್ದಾರೆ. ಈಗ ಅವರ ವಿರುದ್ಧ ಕೇಸುಗಳು ಇಲ್ಲ’ ಎಂದು ಕುಟುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.