ಬೆಂಗಳೂರು: ‘ರನ್ಯಾ ರಾವ್ ಪ್ರಕರಣ ಮುಂದಿಟ್ಟುಕೊಂಡು, ಮುಖ್ಯಮಂತ್ರಿ ಆಕಾಂಕ್ಷಿ ಆಗಿರುವವರೊಬ್ಬರ ಸೆಟ್ಲ್‌ಮೆಂಟ್ ಆಗುತ್ತದೆ. ಅದು ಯಾವ ರೀತಿ ಆಗುತ್ತದೆ ಎಂಬುದನ್ನು ಕಾದು ನೋಡಬೇಕು’ ಎಂದು ಬಿಜೆಪಿ ಶಾಸಕ ಮುನಿರತ್ನ ಮಾರ್ಮಿಕವಾಗಿ ನುಡಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದರು.
‘ರಮೇಶ ಜಾರಕಿಹೊಳಿ ಅವರದ್ದು ಮೊದಲೇ ಸೆಟ್ಲ್‌ಮೆಂಟ್ ಆಗಿತ್ತು. ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಆದ ನಂತರ ನನ್ನ ಮತ್ತು ಯೋಗೀಶ್ವರ್ ಅವರ ಸೆಟ್ಲ್‌ಮೆಂಟ್ ಆಯಿತು. ಈಗ ಯಾರಿಗೆ ಕಾದಿದೆ ನೋಡಬೇಕು. ಯಾವ ರೀತಿ ಸೆಟ್ಲ್‌ಮೆಂಟ್ ಮಾಡಿದ್ದಾರೆ ಎನ್ನುವುದನ್ನು ಕಾದು ನೋಡಬೇಕು. ರನ್ಯಾ ಪ್ರಕರಣದಲ್ಲಿ ಇಬ್ಬರು ಸಚಿವರ ಹೆಸರು ಕೇಳಿಬಂದಿದೆ. ಮುಂದೆ ಏನೇನು ಆಗುತ್ತದೆ ನೋಡೋಣ. ನಮ್ಮದೆಲ್ಲ ಸೆಟ್ಲ್‌ಮೆಂಟ್ ಆಗುವವರೆಗೆ ಗೊತ್ತೇ ಆಗಲಿಲ್ಲ. ಆದ ಮೇಲೆ ಗೊತ್ತಾಯಿತು’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.