ADVERTISEMENT

ಕೊಲೆ: ಐವರಿಗೆ ಜೀವಾವಧಿ ಶಿಕ್ಷೆ

2014ರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 18:27 IST
Last Updated 25 ಜೂನ್ 2019, 18:27 IST

ಮೈಸೂರು: ಮನೆಗೆ ಬೆಂಕಿ ಹಚ್ಚಿ ಒಂದೇ ಕುಟುಂಬದ ನಾಲ್ವರನ್ನು ಕೊಂದ ಪ್ರಕರಣದಲ್ಲಿ ಐವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹ 2 ಲಕ್ಷ ದಂಡ ವಿಧಿಸಿ , ಇಲ್ಲಿನ 4ನೇ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯವು ಮಂಗಳವಾರ ಆದೇಶಿಸಿದೆ. ಉದಯಗಿರಿಯ ಕೆ.ಎನ್.ಪುರ ಬಡಾವಣೆಯ ನಿವಾಸಿಗಳಾದ ಹಸೀನಾ (35), ಆದಿಲ್ (31), ಜಬೀನಾ (33), ಜರೀನ್‌ತಾಜ್ (40), ಸಯೀದಾ (60) ಶಿಕ್ಷೆಗೆ ಗುರಿಯಾದವರು. ಪ್ರಕರಣದ ಮತ್ತೊಬ್ಬ ಆರೋಪಿ ಕೌಸರ್ ಮೃತಪಟ್ಟಿದ್ದಾರೆ.

ಮನೆಯಲ್ಲಿ ವಾಸವಿದ್ದ ಅಫ್ಜಲ್‌ ಪಾಷಾ, ಪತ್ನಿ ಶೀರಿನ್ ತಾಜ್, ಮಕ್ಕಳಾದ ಸೈಫ್ ಹಾಗೂ ಯೂಸೂಫ್ ಮೃತಪಟ್ಟಿದ್ದರು. ಘಟನೆಯಲ್ಲಿ ಮೈಫೂಸ್, ಯೂನೂಸ್, ಮಸೂದ್ ತೀವ್ರವಾಗಿ ಗಾಯಗೊಂಡಿದ್ದರು.

ವಿವರ: ಮನೆಯ ಸಮೀಪದಲ್ಲಿ ಮಕ್ಕಳು ಬಹಿರ್ದೆಸೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಹಸೀನಾ, ಅಫ್ಜಲ್ ಪಾಷಾ ಕುಟುಂಬಗಳ ನಡುವೆ ಜಗಳ ನಡೆದಿತ್ತು. ಇದೇ ಕಾರಣಕ್ಕಾಗಿ, ಹಸೀನಾ ಕುಟುಂಬದವರು ಅಫ್ಜಲ್‌ ಮನೆಗೆ ಬೆಂಕಿ ಹಚ್ಚಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.