ADVERTISEMENT

ಡೀಸೆಲ್‌, ಪೆಟ್ರೋಲ್‌ ಎಂಜಿನ್ ನಿಷೇಧ ಆಗ್ತಾವೆ:ನಿರಾಣಿ

10 ವರ್ಷಗಳಲ್ಲಿ ಕರ್ನಾಟಕ ಸೇರಿ ಎಲ್ಲ ರಾಜ್ಯಗಳಲ್ಲೂ ನಿಷೇಧ ಜಾರಿ: ನಿರಾಣಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 21:39 IST
Last Updated 6 ಡಿಸೆಂಬರ್ 2022, 21:39 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ಬೆಂಗಳೂರು: ಮುಂದಿನ 10 ವರ್ಷಗಳಲ್ಲಿ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಪೆಟ್ರೋಲ್‌ ಮತ್ತು ಡೀಸೆಲ್ ಎಂಜಿನ್‌ಗಳ ಬಳಕೆ ಸಂಪೂರ್ಣನಿಷೇಧವಾಗಲಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ಮಂಗಳ ವಾರ ಏರ್ಪಡಿಸಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇವೆರಡಕ್ಕೆ ಪರ್ಯಾಯವಾಗಿ ಎಥೆನಾಲ್‌ಬಳಸಬಹುದಾದ ಎಂಜಿನ್‌ ಗಳು ಬರಲಿವೆ. ಈಗ ಶೇ 20 ರಷ್ಟು ಎಥೆನಾಲ್‌ ಬಳಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಥೆನಾಲ್‌ ಬಳಕೆ ದ್ವಿಗುಣಗೊಳ್ಳಲಿದೆ ಎಂದರು.

ಸ್ವಂತ ಜಮೀನು ಹೊಂದಿರುವ ಕಂಪನಿಗಳು ಸ್ವಾಧೀನ ಶುಲ್ಕ ಪಾವತಿಸ ಬೇಕಾಗಿಲ್ಲ. ಸ್ವಂತ ಭೂಮಿ ಹೊಂದಿರುವ ಕಂಪನಿಗಳು ಕೆಐಎಡಿಬಿಗೆ ಸ್ವಾಧೀನ ಶುಲ್ಕವನ್ನು ಪಾವತಿಸುವುದು
ಅನಿವಾರ್ಯವಾಗಿತ್ತು. ಈ ನಿಯಮಕ್ಕೆ ತಿದ್ದುಪಡಿ ತರಲಾಗಿದ್ದು, ಕೈಗಾರಿಕೆಗಳು ಕೆಐಎಡಿಬಿಗೆ ಶೇ 12.5 ರಷ್ಟು ಸೇವಾ ಶುಲ್ಕವನ್ನು ಪಾವತಿಸಿದರೆ ಸಾಕು ಎಂದು ಹೇಳಿದರು.

ADVERTISEMENT

‘ಈಚೆಗೆ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಪ್ರಮಾಣ ಪತ್ರಆಧಾರಿತ ಒಪ್ಪಂದ ಮಾಡಿಕೊಂಡಿದ್ದೇವೆ. ಅಂದರೆ, ಯಾವುದು ನಮ್ಮ ರಾಜ್ಯದಲ್ಲಿ ಖಚಿತವಾಗಿ ಹೂಡಿಕೆ ಮಾಡಿ ಉದ್ಯಮ
ಗಳನ್ನು ಆರಂಭಿಸುತ್ತಾರೋ ಅಂತಹ ವರಿಗೆ ಮಾತ್ರ ಆದ್ಯತೆ ಕೊಟ್ಟಿದ್ದೇವೆ. ಹಿಂದಿನ ಸರ್ಕಾರಗಳ ಕೆಲವು ತಪ್ಪು ಗಳಿಂದಾಗಿ ಯೋಜನೆಗಳು ಅನುಷ್ಠಾನವಾಗಲಿಲ್ಲ’ ಎಂದರು.

ಸಂವಾದದಲ್ಲಿ ಪ್ರೆಸ್‌ಕ್ಲಬ್ ಅಧ್ಯಕ್ಷ ಆರ್‌. ಶ್ರೀಧರ್, ಪ್ರಧಾನ
ಕಾರ್ಯದರ್ಶಿ ಬಿ.‍ಪಿ. ಮಲ್ಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.