ADVERTISEMENT

ಮೈಸೂರು ದಸರಾ | ಕಲಾತಂಡ: ಉಡುಪಿ‌ ಪ್ರಥಮ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 18:48 IST
Last Updated 3 ಅಕ್ಟೋಬರ್ 2025, 18:48 IST
ಮೈಸೂರು ದಸರಾ ಅಂಗವಾಗಿ ಗುರುವಾರ ನಡೆದ ಜಂಬೂಸವಾರಿ ವೀಕ್ಷಿಸಲು ಅರಮನೆ ಆವರಣದಲ್ಲಿ ಜನರು ‍ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು– ಪ್ರಜಾವಾಣಿ ಚಿತ್ರ
ಮೈಸೂರು ದಸರಾ ಅಂಗವಾಗಿ ಗುರುವಾರ ನಡೆದ ಜಂಬೂಸವಾರಿ ವೀಕ್ಷಿಸಲು ಅರಮನೆ ಆವರಣದಲ್ಲಿ ಜನರು ‍ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು– ಪ್ರಜಾವಾಣಿ ಚಿತ್ರ   

ಮೈಸೂರು: ಉಡುಪಿ ಜಿಲ್ಲೆಯ ಪಡುಬೈಲೂರಿನ ‘ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡ’ವು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಮೊದಲ ಬಹುಮಾನ ಪಡೆದಿದೆ.  ನಾಗರಾಜ ಐತಾಳ್‌ ನೇತೃತ್ವದ ಈ ತಂಡ ₹ 15ಸಾವಿರ ಗಳಿಸಿದೆ.

ಮೆರವಣಿಗೆ ಮತ್ತು ಪಂಜಿನ ಕವಾಯತು ಉಪಸಮಿತಿಯ ಉಪವಿಶೇಷಾಧಿಕಾರಿ ಸೀಮಾ ಲಾಟ್ಕರ್ ಬಹುಮಾನಿತ ಕಲಾತಂಡಗಳ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. 

ದ್ವಿತೀಯ ಬಹುಮಾನವನ್ನು ‘ಗೊರವರ ಕುಣಿತ’ಕ್ಕೆ ಸಿಕ್ಕಿದ್ದು, ಚಾಮರಾಜನಗರ ಜಿಲ್ಲೆಯ ‘ಭಕ್ತ ಕನಕದಾಸರ ಗೊರವರ ಕುಣಿತ ಕಲಾಸಂಘ’ದ ಆರ್.ಎಂ.ಶಿವಮಲ್ಲು, ಮೈಸೂರಿನ ಕುವೆಂಪುನಗರದ ‘ಸರಪಣಿ ಮೈಲಾರ ಲಿಂಗೇಶ್ವರ ಗೊರವರ ತಂಡ’ದ ಚನ್ನಮಲ್ಲೇಗೌಡ ಹಂಚಿಕೊಂಡಿದ್ದಾರೆ. ತಲಾ ₹ 5ಸಾವಿರ ನಗದು ಬಹುಮಾನಕ್ಕೆ ಪಾತ್ರವಾಗಿದ್ದಾರೆ. 

ADVERTISEMENT

ಬೀದರ್‌ನ ಪಾರ್ವತಿ ಮಲ್ಲಪ್ಪ ಸಂಗೋಳಗೆ ಹಾಗೂ ಯಾದಗಿರಿಯ ಕಮಲಿಬಾಯಿ ಚಂದ್ರ ಚವ್ಹಾಣ ಅವರ ‘ಲಂಬಾಣಿ’ ನೃತ್ಯಕ್ಕೆ 3ನೇ ಬಹುಮಾನ ದೊರೆತಿದ್ದು, ತಲಾ ₹ 2,500 ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.