ADVERTISEMENT

Photos| ಕೊರೊನಾ ಆತಂಕದ ನಡುವೆ ಸರಳ ಪಂಚಮಿ: ನಾಗರಕಟ್ಟೆಗಳಿಗೆ ಮಹಿಳೆಯರ ಪೂಜೆ

ನಾಗರ ಪಂಚಮಿಯ ಹಿನ್ನೆಲೆಯಲ್ಲಿ ಶನಿವಾರ ರಾಜ್ಯದ ಹಲವೆಡೆನಾಗರಕಟ್ಟೆ ಹಾಗೂ ಹುತ್ತಗಳಿಗೆ ಹಾಲೆರೆದರು. ಕೋವಿಡ್‌–19 ಸಾಂಕ್ರಾಮಿಕ ರೋಗ ಆವರಿಸಿರುವ ಕಾರಣದಿಂದಾಗಿ ಎಲ್ಲಿಯೂಜನಜಂಗುಳಿ ಕಾಣಿಸಲಿಲ್ಲ. ಆಚರಣೆ ಸಾಂಕೇತಿವಾಗಿ ಕಂಡಿತು.

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 10:38 IST
Last Updated 25 ಜುಲೈ 2020, 10:38 IST
ದಾವಣಗೆರೆಯಲ್ಲಿ ನಾಗಪಂಚಮಿ ಅಂಗವಾಗಿ ಭಕ್ತರು ಕಲ್ಲು ನಾಗರ ಮೂರ್ತಿಗೆ ಹಾಲು ಹಾಕಿ ಭಕ್ತಿ ಸಮರ್ಪಿಸುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯಲ್ಲಿ ನಾಗಪಂಚಮಿ ಅಂಗವಾಗಿ ಭಕ್ತರು ಕಲ್ಲು ನಾಗರ ಮೂರ್ತಿಗೆ ಹಾಲು ಹಾಕಿ ಭಕ್ತಿ ಸಮರ್ಪಿಸುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   
ಹುಬ್ಬಳ್ಳಿಯ ಅಶೋಕನಗರದಲ್ಲಿರುವ ಮಾರುತಿ ದೇವಸ್ಥಾನದ ಸಮೀಪ ಶನಿವಾರ ನಾಗರ ಪಂಚಮಿ ಹಬ್ಬದ ಅಂಗವಾಗಿ ಸಂಭ್ರಮದಿಂದ ಯುವತಿಯರು ಜೋಕಾಲಿ ಆಡುತ್ತಿರುವುದು – ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ
ನಾಗರ ಪಂಚಮಿ ಪ್ರಯುಕ್ತ ಹಾವೇರಿ ತಾಲ್ಲೂಕು ಸಮೀಪದ ವರದಾ ನದಿಯಲ್ಲಿ ಮಹಿಳೆಯರು ಸಂಭ್ರಮದಿಂದ ಗಂಗಾಪೂಜೆ ನೆರೆವೇರಿಸಿದರು
ಹುಬ್ಬಳ್ಳಿಯ ಸ್ಟೇಶನ್ ರಸ್ತೆಯ ಈಶ್ವರ ದೇವಸ್ಥಾನದಲ್ಲಿ ಶನಿವಾರ ಮಹಿಳೆಯರು ನಾಗಪ್ಪನ ಮೂರ್ತಿಗೆ ಹಾಲೆರೆದು ಪೂಜೆ ಮಾಡಿದರು- ಪ್ರಜಾವಾಣಿ ಚಿತ್ರ/ತಾಜುದ್ದೀನ ಆಜಾದ್‌
ಕಲಬುರ್ಗಿಯ ಐವಾನ್-ಇ-ಶಾಹಿ ಬಡಾವಣೆಯಲ್ಲಿ ಮಹಿಳೆಯರು ಶನಿವಾರ ನಾಗ ಪಂಚಮಿ ಪ್ರಯುಕ್ತ ನಾಗರ ಕಲ್ಲಿಗೆ ಹಾಲನ್ನು ಎರೆದರು. - Photo/ Prashanth HG
ಕಲಬುರ್ಗಿಯ ಪ್ರಶಾಂತ ನಗರದ ಹನ್ನೆರಡು ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಮಹಿಳೆಯರು ಶನಿವಾರ ನಾಗ ಪಂಚಮಿ ಪ್ರಯುಕ್ತ ನಾಗರ ಹುತ್ತಕ್ಕೆ ಹಾಲನ್ನು ಎರೆದರು. - Photo/ Prashanth HG
ಮೈಸೂರಿನ ಅಮೃತೇಶ್ವರ ದೇಗುಲದಲ್ಲಿ ಶನಿವಾರ ನಾಗರ ಪಂಚಮಿ ಪ್ರಯುಕ್ತ ಭಕ್ತರು ನಾಗರಕಲ್ಲುಗಳಿಗೆ ಹಾಲನೆರೆದರು. ಚಿತ್ರ– ಬಿ.ಆರ್‌ ಸವಿತಾ
ಕಲಬುರ್ಗಿಯಲ್ಲಿ ಶನಿವಾರ ನಾಗರಮೂರ್ತಿಗೆ ಪೂಜೆ ಸಲ್ಲಿಸಿದ ಯುವತಿಯರು
ಕಲಬುರ್ಗಿಯ ಶಕ್ತಿನಗರದ ಅರಳಿಕಟ್ಟೆಯಲ್ಲಿ ಶನಿವಾರ ಗೃಹಿಣಿ ನಾಗರಮೂರ್ತಿಗೆ ಪಜೆ ಸಲ್ಲಿಸಿದರು
ಕಲಬುರ್ಗಿಯ ನಾಗರಕಟ್ಟೆಯಲ್ಲಿ ಯುವತಿಯರ ಸೆಲ್ಫಿ ಸಂಭ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.