ನವದೆಹಲಿ: ನಗರಗಳ ನಡುವಿನ ಸಂಪರ್ಕ ಜಾಲ ಹೆಚ್ಚಿಸುವ ಉದ್ದೇಶದಿಂದ ರಾಜ್ಯದಲ್ಲಿ ನಾಲ್ಕು ನಮೋ ಭಾರತ್ ರೈಲ್ವೆ ಕಾರಿಡಾರ್ ಯೋಜನೆ ನಿರ್ಮಿಸಲು ವಿವರವಾದ ಅಧ್ಯಯನ ನಡೆಸುವಂತೆ ರಾಷ್ಟ್ರೀಯ ರಾಜಧಾನಿ ವಲಯ ಸಾರಿಗೆ ನಿಗಮಕ್ಕೆ (ಎನ್‌ಸಿಆರ್‌ಟಿಸಿ) ಕರ್ನಾಟಕ ಸರ್ಕಾರ ಪ್ರಸ್ತಾವ ಸಲ್ಲಿಸಿದೆ.
ಬೆಂಗಳೂರು–ಹೊಸಕೋಟೆ–ಕೋಲಾರ (65 ಕಿ.ಮೀ), ಬೆಂಗಳೂರು–ಮೈಸೂರು (145 ಕಿ.ಮೀ), ಬೆಂಗಳೂರು–ತುಮಕೂರು (60 ಕಿ.ಮೀ) ಹಾಗೂ ಬೆಂಗಳೂರು–ಹೊಸೂರು–ಕೃಷ್ಣಗಿರಿ–ಧರ್ಮಪುರಿ (138 ಕಿ.ಮೀ) ನಡುವೆ ಕಾರಿಡಾರ್ ನಿರ್ಮಾಣಕ್ಕೆ ಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.