ADVERTISEMENT

ನಂಜನಗೂಡು: ಒಂದೂವರೆ ತಿಂಗಳಲ್ಲಿ ₹1.98 ಕೋಟಿ ದಾಖಲೆಯ ಕಾಣಿಕೆ

ಶ್ರೀಕಂಠೇಶ್ವರ ದೇವಾಲಯ ಹುಂಡಿ ಆದಾಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 20:35 IST
Last Updated 25 ಡಿಸೆಂಬರ್ 2020, 20:35 IST
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ನಡೆದ, ಹರಕೆ ಹುಂಡಿಗಳ ಕಾಣಿಕೆ ಹಣ ಎಣಿಕೆ ಕಾರ್ಯ
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ನಡೆದ, ಹರಕೆ ಹುಂಡಿಗಳ ಕಾಣಿಕೆ ಹಣ ಎಣಿಕೆ ಕಾರ್ಯ   

ನಂಜನಗೂಡು: ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ಕಳೆದ ಒಂದೂವರೆ ತಿಂಗಳಿನಲ್ಲಿ ದಾಖಲೆಯ ₹ 1.98 ಕೋಟಿ ಕಾಣಿಕೆ ಹರಿದುಬಂದಿದೆ.

ದೇವಾಲಯದ 31 ಹರಕೆ ಹುಂಡಿಗಳಲ್ಲಿನ ಹಣ ಎಣಿಕೆ ಕಾರ್ಯ ಗುರುವಾರ ತಡರಾತ್ರಿಯವರೆಗೆ ನಡೆದಿದ್ದು, ₹1.98 ಕೋಟಿ ನಗದು, 77 ಗ್ರಾಂ ಚಿನ್ನ, 5.7 ಕೆ.ಜಿ ಬೆಳ್ಳಿ ಹಾಗೂ ವಿವಿಧ ದೇಶಗಳ 16 ನೋಟುಗಳು ಲಭ್ಯವಾಗಿವೆ. ಇದು ಇದುವರೆಗೆ ಸಂಗ್ರಹವಾದ ಕಾಣಿಕೆಯಲ್ಲಿಯೇ ಅತಿ ಹೆಚ್ಚು ಎಂದು ತಿಳಿದುಬಂದಿದೆ.

‘ಕೋವಿಡ್–19 ನಿರ್ಬಂಧ ಸಡಿಲಗೊಳಿಸಿ, ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರಿಂದ ಕಾರ್ತಿಕ ಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಯಿತು. ಹೀಗಾಗಿ ಹುಂಡಿಗಳಲ್ಲಿ ಹೆಚ್ಚಿನ ಹಣ ಸಂಗ್ರಹವಾಗಿದೆ’ ಎಂದು ದೇವಾಲಯದ ಎ.ಇ.ಒ ವೆಂಕಟೇಶ್ ಪ್ರಸಾದ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.