ಪ್ರಿಯಾಂಕ್ ಖರ್ಗೆ
ಬೆಂಗಳೂರು: ನರೇಗಾ ಯೋಜನೆ ನೆರವಿನಿಂದ ‘ಜಲ ಸಂಚಯ ಜನ ಭಾಗಿದಾರಿ’ ಅಭಿಯಾನದಡಿ ಜಲ ಸಂರಕ್ಷಣೆಯಲ್ಲಿ ತೊಡಗಿರುವ ರಾಜ್ಯದ ಏಳು ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಜಲ ಸಂರಕ್ಷಣೆಗಾಗಿ ಗದಗ ಜಿಲ್ಲೆಯಲ್ಲಿ 11,971, ವಿಜಯಪುರ ಜಿಲ್ಲೆಯಲ್ಲಿ 11,453, ಬೀದರ್ ಜಿಲ್ಲೆಯಲ್ಲಿ 10,297, ಕೋಲಾರ ಜಿಲ್ಲೆಯಲ್ಲಿ 8,470, ತುಮಕೂರು ಜಿಲ್ಲೆಯಲ್ಲಿ 9,885, ಮಂಡ್ಯ ಜಿಲ್ಲೆಯಲ್ಲಿ 7,192 ಮತ್ತು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ 7,815 ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಈ ಅಭಿಯಾನದಡಿ ಅಂತರ್ಜಲವನ್ನು ಹೆಚ್ಚಿಸಲು ಕ್ರಮ, ಮಳೆ ನೀರು ಸಂರಕ್ಷಣೆ, ಜಲ ಸಂರಕ್ಷಣೆಯ ಸಂಸ್ಕೃತಿ ಬಗ್ಗೆ ಅರಿವು, ಕೊಳವೆ ಬಾವಿ ಹಾಗೂ ಸಮಗ್ರ ಕೆರೆ–ಕಟ್ಟೆಗಳ ಅಭಿವೃದ್ಧಿ, ಕಲ್ಯಾಣಿಗಳ ಜೀರ್ಣೋದ್ಧಾರ, ಕಿಂಡಿ ಅಣೆಕಟ್ಟೆಗಳ ನಿರ್ಮಾಣ ಸೇರಿ ಜಲ ಸಂರಕ್ಷಣೆಯ ಮಾರ್ಗಗಳನ್ನು ಅಳವಡಿಸಿಕೊಳ್ಳಲು ಗ್ರಾಮ ಪಂಚಾಯಿತಿಗಳು ಆಸಕ್ತಿ ತೋರಿದ್ದು, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿವೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.