ADVERTISEMENT

‘ನೆಟ್‌’ ಸಮಸ್ಯೆ ಮೀರಿ ‘ನೀಟ್‌’ ತಯಾರಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 19:50 IST
Last Updated 25 ಜುಲೈ 2019, 19:50 IST

ಬೆಂಗಳೂರು: ಇಂಟರ್‌ನೆಟ್‌ ವೇಗವಾಗಿಲ್ಲ, ಆನ್‌ಲೈನ್‌ ತರಗತಿಗಳ ಕೋಚಿಂಗ್‌ ಪಡೆಯುವುದು ಹೇಗೆ? ಗ್ರಾಮೀಣ ಭಾಗದ ಲಕ್ಷಾಂತರ ವಿದ್ಯಾರ್ಥಿಗಳ ಈ ಪ್ರಶ್ನೆಗೆ ಉತ್ತರ ನೀಡುವ ಕೆಲಸ ಮಾಡಿದೆ ಆಕಾಶ್ ಡಿಜಿಟಲ್‌.

ಎಂಟು ವರ್ಷಗಳಿಂದ ಈ ಸೇವೆ ನೀಡುತ್ತಿರುವ ಸಂಸ್ಥೆ ನೆಟ್‌ವರ್ಕ್‌ ಸಮಸ್ಯೆ ನಿವಾರಿಸಿದ್ದು ಮಾತ್ರವಲ್ಲ, ನೀಟ್‌, ಜೆಇಇ, ಸಿಇಟಿ ಸಹಿತ ಹಲವಾರು ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದೆ.

‘ಆಕಾಶ್‌ ಐಟ್ಯೂಟರ್‌ ಕಲಿಕಾ ಸಾಮಗ್ರಿಯನ್ನು ಎಸ್‌ಡಿ ಕಾರ್ಡ್‌ನಲ್ಲೇ ಹಾಕಿಸಿಕೊಂಡು ಮೊಬೈಲ್‌ ಫೋನ್, ಟ್ಯಾಬ್ಲೆಟ್‌, ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಇಂಟರ್‌ನೆಟ್‌ ಸಂಪರ್ಕ ಇಲ್ಲದೆಯೂ ಓದಬಹುದು’ ಎಂದುಆಕಾಶ್‌ ಡಿಜಿಟಲ್‌ನ ಸಿಇಒ ಅನುಜ್‌ ತಿವಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಅತ್ಯಂತ ನಿಧಾನಗತಿಯ ಇಂಟರ್‌ನೆಟ್‌ ಸಂಪರ್ಕದಲ್ಲೂ ವಿದ್ಯಾರ್ಥಿಗಳು ಆನ್‌ಲೈನ್‌ ಪರೀಕ್ಷೆ ಬರೆಯಬಹುದು. ಪರೀಕ್ಷೆ ಬರೆಯುತ್ತಿದ್ದಾಗ ಇಂಟರ್‌ನೆಟ್‌ ಸಂಪರ್ಕ ಕೈಕೊಟ್ಟರೆ ಪರೀಕ್ಷೆಯನ್ನು ಬರೆಯುತ್ತಲೇ ಇರಬಹುದು. ಜತೆಗೆ ವಿದ್ಯಾರ್ಥಿಗಳು ಮುದ್ರಿತ ಪುಸ್ತಕಗಳು ಮತ್ತು ಇ–ಬುಕ್‌ ಮಾದರಿಯಲ್ಲಿ ಕಲಿಕಾ ಸಾಮಗ್ರಿಗಳನ್ನು ನೀಡಲಾಗುತ್ತದೆ. ಆಕಾಶ್ ಐಟ್ಯುಟರ್‌, ಆಕಾಶ್‌ ಲೈವ್‌, ಆಕಾಶ್‌ ಪ್ರಾಕ್ಟೀಸ್‌ ಟೆಸ್ಟ್‌ ಎಂಬ ಮೂರು ಸೇವೆಗಳನ್ನು ಸಂಸ್ಥೆ ಒದಗಿಸುತ್ತಿದೆ. ₹ 2 ಸಾವಿರದಿಂದ ₹ 1.43 ಲಕ್ಷದವರೆಗೆ ಶುಲ್ಕ ಇದೆ.

ಮಾಹಿತಿಗೆhttps://digital.aakash.ac.in ಸಂಪರ್ಕಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.