ಕಳವು
ಜಗಳೂರು: ಜಗಳೂರು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮನೆಗೇ ಕನ್ನ ಹಾಕಿರುವ ಕಳ್ಳರು ನಗ, ನಾಣ್ಯ ದೋಚಿ ಪರಾರಿಯಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
‘ಪಟ್ಟಣದ ಹೊರವಲಯದ ಮುದ್ದಪ್ಪ ಬಡಾವಣೆಯಲ್ಲಿರುವ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆಶಾ ಅವರ ಮನೆಯ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಅಲ್ಮೆರಾ ಒಡೆದು ₹ 5.79 ಲಕ್ಷ ಮೌಲ್ಯದ 116 ಗ್ರಾಂ ಬಂಗಾರದ ಆಭರಣ ಹಾಗೂ ₹ 10,000 ಮೊತ್ತದ 130 ಗ್ರಾಂ ಬೆಳ್ಳಿ ಸಾಮಾಗ್ರಿ ಕಳವು ಮಾಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಆಶಾ ಅವರು ಕಾರ್ಯನಿಮಿತ್ತ ದಾವಣಗೆರೆಗೆ ತೆರಳಿದ್ದರು. ಅವರ ತಾಯಿ ಜಯಮ್ಮ, ಸ್ವಗ್ರಾಮ ಮುಸ್ಟೂರಿಗೆ ಹೋಗಿದ್ದರಿಂದ ಮನೆಗೆ ಬೀಗ ಹಾಕಲಾಗಿತ್ತು. ಆಶಾ ಅವರು ಶನಿವಾರ ಬೆಳಿಗ್ಗೆ ದಾವಣಗೆರೆಯಿಂದ ಹಿಂದಿರುಗಿದಾಗ ಮನೆಯಲ್ಲಿ ಕಳವಾಗಿರುವ ವಿಷಯ ತಿಳಿದಿದೆ.
ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.