ADVERTISEMENT

ಪ್ರವೀಣ್‌ ನೆಟ್ಟಾರು ಹತ್ಯೆ: ಪಿಎಫ್‌ಐ ಮುಖಂಡರ ಸುಳಿವು ನೀಡಿದರೆ ₹ 5 ಲಕ್ಷ ಬಹುಮಾನ

ಮತ್ತಿಬ್ಬರ ಪತ್ತೆಗೆ ನೆರವಾಗುವಂತೆ ಕೋರಿದ ಎನ್‌ಐಎ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 23:27 IST
Last Updated 18 ಜನವರಿ 2023, 23:27 IST
ಪ್ರವೀಣ್‌ ನೆಟ್ಟಾರು
ಪ್ರವೀಣ್‌ ನೆಟ್ಟಾರು   

ಮಂಗಳೂರು: ಬಿಜೆಪಿ ಯುವಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್‌ ನೆಟ್ಟಾರು ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮತ್ತಿಬ್ಬರು ಆರೋಪಿಗಳ ಸುಳಿವು ನೀಡಿದವರಿಗೆ ತಲಾ ₹ 5 ಲಕ್ಷ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಘೋಷಿಸಿದೆ.

‘ನಿಷೇಧಿತ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕೊಡಾಜೆ ಮಹಮ್ಮದ್‌ ಶರೀಫ್‌ (53) ಮತ್ತು ನೆಕ್ಕಿಲಾಡಿಯ ಮಸೂದ್‌ ಕೆ.ಎ. ಇವರು 2022ರ ಜುಲೈ 26ರಂದು ನಡೆದ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳು. ಇವರಿಬ್ಬರ ಸುಳಿವು ನೀಡಿದರೆ ಬಹುಮಾನ ನೀಡುತ್ತೇವೆ. ಮಾಹಿತಿ ನೀಡಿದವರ ವಿವರ ಬಹಿರಂಗಪಡಿಸುವುದಿಲ್ಲ’ ಎಂದು ಎನ್‌ಐಎ ಹೇಳಿದೆ.

ಈ ಹತ್ಯೆ ಪ್ರಕರಣ ಸಂಬಂಧ ಎನ್‌ಐಎ ನಾಲ್ವರು ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ಎರಡೂವರೆ ತಿಂಗಳ ಹಿಂದೆಯೇ ಬಹುಮಾನ ಘೋಷಣೆ ಮಾಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕು ಬೆಳ್ಳಾರೆ ಗ್ರಾಮದ ಮೊಹಮ್ಮದ್‌ ಮುಸ್ತಾಫ ಎಸ್‌. ಅಲಿಯಾಸ್‌ ಮುಸ್ತಾಫ ಪೈಚಾರು ಹಾಗೂ ಕೊಡಗು ಜಿಲ್ಲೆಯ ಮಡಿಕೇರಿಯ ತುಫೈಲ್‌ ಎಂ.ಎಚ್ ಅವರ ಪತ್ತೆಗೆ ನೆರವಾದವರಿಗೆ ತಲಾ ₹ 5 ಲಕ್ಷ ಹಾಗೂ ಸುಳ್ಯದ ಕಲ್ಲುಮುಟ್ಟು ಮನೆ ನಿವಾಸಿ ಉಮ್ಮರ್‌ ಫಾರೂಕ್‌ ಎಂ.ಆರ್‌. ಅಲಿಯಾಸ್‌ ಉಮ್ಮರ್‌ ಹಾಗೂ ಬೆಳ್ಳಾರೆ ಗ್ರಾಮದ ಅಬೂಬಕ್ಕರ್‌ ಸಿದ್ಧಿಕ್‌ ಅಲಿಯಾಸ್ ಪೇಂಟರ್‌ ಸಿದ್ಧಿಕ್‌ ಪತ್ತೆಗೆ ನೆರವಾದವರಿಗೆ ತಲಾ ₹ 2 ಲಕ್ಷ ಬಹುಮಾನ ನೀಡುವುದಾಗಿ ತಿಳಿಸಿತ್ತು.

ADVERTISEMENT

ಮಾಹಿತಿ ನೀಡಬೇಕಾದ ವಿಳಾಸ: ಪೊಲೀಸ್‌ ವರಿಷ್ಠಾಧಿಕಾರಿ, ರಾಷ್ಟ್ರೀಯ ತನಿಖಾ ದಳ, 8ನೇ ಮಹಡಿ, ಸರ್‌.ಎಂ.ವಿಶ್ವೇಶ್ವರಯ್ಯ ಕೇಂದ್ರೀಯ ಸದನ, ದೊಮ್ಮಲೂರು, ಬೆಂಗಳೂರು –560071

ಸಂಪರ್ಕ: 080 29510900 ಅಥವಾ 8904241100, ಇ–ಮೇಲ್‌:info.blr.nia@gov.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.