ADVERTISEMENT

ಫೆ. 4ರಂದು ಅನುದಾನ ರಹಿತ ಶಾಲೆಗಳ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 22:21 IST
Last Updated 27 ಜನವರಿ 2023, 22:21 IST

ಬೆಂಗಳೂರು: ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮ) ಫೆಬ್ರುವರಿ 4ರಂದು ಬೆಂಗಳೂರಿನಲ್ಲಿ ವಿಶೇಷ ಸಮ್ಮೇಳನ ಆಯೋಜಿಸಿದೆ.

ಕುಸ್ಮದ 40ನೇ ವಾರ್ಷಿಕೋತ್ಸವದ ಅಂಗವಾಗಿ ಬೆಂಗಳೂರಿನ ಜಯನಗರದ ಆರ್‌.ವಿ. ಟೀಚರ್ಸ್ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಈ ಸಮ್ಮೇಳನ ಅಂದು ಬೆಳಿಗ್ಗೆ 9:30ಕ್ಕೆ ಆರಂಭವಾಗಲಿದೆ.

ಅನುದಾನ ರಹಿತ ಶಾಲೆಗಳ ಸಮಸ್ಯೆ, ನ್ಯಾಯಾಲಯದ ತೀರ್ಪು, ಇಎಸ್ಐ, ಗ್ರಾಚ್ಯುಟಿ, ಮಾನ್ಯತೆ ನವೀಕರಣ, ಆಸ್ತಿ ತೆರಿಗೆ, ಸರ್ಕಾರದ ನೂತನ ಆದೇಶಗಳ ಬಗ್ಗೆ ವಿವಿಧ ತಜ್ಞರಿಂದ ಮಾರ್ಗದರ್ಶನ, ಉಪನ್ಯಾಸಗಳು ನಡೆಯಲಿವೆ. ಶಿಕ್ಷಣ ತಜ್ಞರು, ಕಾನೂನು ತಜ್ಞರು ಭಾಗವಹಿಸುವರು.

ADVERTISEMENT

ಶಿಕ್ಷಣ ತಜ್ಞ ಜಿ.ಎಸ್. ಶರ್ಮಾ ಅವರ ನೇತೃತ್ವ ದಲ್ಲಿ 1984ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಘಟನೆ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಹಿತರಕ್ಷಣೆಗಾಗಿ ಹೋರಾ ಡಿದ ಇತಿಹಾಸ ಹೊಂದಿದೆ. ಸರ್ಕಾರದ ಭಾಷಾ ನೀತಿಯ ಕುರಿತು ಸಂಘಟನೆ ನ್ಯಾಯಾಂಗ ಹೋರಾಟ ನಡೆಸಿ, ಜಯಗಳಿಸಿದೆ ಎಂದು ಸಂಘಟನೆಯ ಅಧ್ಯಕ್ಷ ಎಸ್. ಸತ್ಯಮೂರ್ತಿ, ಕಾರ್ಯದರ್ಶಿ ಎ.ಮರಿಯಪ್ಪ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.