ADVERTISEMENT

ಲೋಕಸಭೆ ಚುನಾವಣೆ ಬಳಿಕ ಉ. ಕ ಪ್ರತ್ಯೇಕ ರಾಜ್ಯ: ಕತ್ತಿ ಹೇಳಿಕೆ

ಅರಣ್ಯ ಸಚಿವ ಉಮೇಶ ಕತ್ತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 21:07 IST
Last Updated 22 ಜೂನ್ 2022, 21:07 IST
   

ಬೆಳಗಾವಿ: ‘2024ರ ಲೋಕಸಭಾ ಚುನಾವಣೆಯ ಬಳಿಕ ಉತ್ತರ ಕರ್ನಾಟಕವುಪ್ರತ್ಯೇಕ ರಾಜ್ಯವಾಗಿ ನಿರ್ಮಾಣ ಆಗಲಿದೆ’ ಎಂದುಅರಣ್ಯಸಚಿವ ಉಮೇಶಕತ್ತಿಹೇಳಿದರು.

ಇಲ್ಲಿನ ಬಾರ್‌ ಅಸೋಸಿಯೇಷನ್‌ ವತಿಯಿಂದ ಬುಧವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತ ನಾಡಿ, ‘ದೇಶದಲ್ಲಿ 50 ಹೊಸ ರಾಜ್ಯಗಳನ್ನು ರಚನೆ ಮಾಡುವ ಕುರಿತು ಚರ್ಚೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಇವುಗಳನ್ನು ರಚನೆ ಮಾಡಲಿದ್ದಾರೆ. ಇದರಲ್ಲಿ ಉತ್ತರ ಕರ್ನಾಟಕವೂ ಸೇರಿದೆ’ ಎಂದು ತಿಳಿಸಿದರು.

‘ಸದ್ಯ ಕರ್ನಾಟಕದ ಸಮಗ್ರ ಜನ ಸಂಖ್ಯೆಗೆ ಅನುಗುಣವಾಗಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡುವುದು ನಿಶ್ಚಿತ. ಎಲ್ಲರೂ ಹೋರಾಟ ಮಾಡಲುಸಿದ್ಧತೆ ಮಾಡಿಕೊಳ್ಳಬೇಕು. ಮಹಾರಾಷ್ಟ್ರವನ್ನು ಮೂರು ರಾಜ್ಯಗಳಾಗಿ, ಉತ್ತರ ಪ್ರದೇಶದಲ್ಲಿ ನಾಲ್ಕು ರಾಜ್ಯಗಳಾಗಿ ಮಾಡುವ ಪ್ರಸ್ತಾಪವೂ ಇದೆ’ ಎಂದರು.

ADVERTISEMENT

‘ಬೆಂಗಳೂರಿನಲ್ಲಿ ಈಗಾಗಲೇ ಸಾಕಷ್ಟು ಐಟಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಇನ್ನು ಹೊಸ ಐಟಿ, ಬಿಟಿ ಕಂಪನಿ ಬರಲು ಸಾಧ್ಯವಿಲ್ಲ. ಉತ್ತರ ಕರ್ನಾಟಕದ ಜನರೇ ಬೆಂಗಳೂರಿಗೆ ಹೋಗಿ ಅಲ್ಲಿ ಕೆಲಸ ಮಾಡಬೇಕಾಗಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಎಲ್ಲ ಕೆಲಸಗಳೂ ಇಲ್ಲೇ ಸಿಗಲಿವೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.