ADVERTISEMENT

ಶಾಸಕರ ಸಂಖ್ಯೆ 21ರ ಬದಲು 51 ಆಗಲಿ: ಪ್ರಸನ್ನಾನಂದಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 19:28 IST
Last Updated 15 ಜನವರಿ 2020, 19:28 IST
ಹರಿಹರದಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಪಂಚಮಸಾಲಿ ಹರಜಾತ್ರಾ ಮಹೋತ್ಸವ ಹಾಗೂ ಅಕ್ಕಮಹಾದೇವಿ ವಚನ ವಿಜಯೋತ್ಸವದಲ್ಲಿ ನಟಿ ರಾಗಿಣಿ ದ್ವಿವೇದಿ, ಸಚಿವೆ ಶಶಿಕಲಾ ಜೊಲ್ಲೆ, ವಚನಾನಂದ ಸ್ವಾಮೀಜಿ ಅಕ್ಕಮಹಾದೇವಿ ಗ್ರಂಥವನ್ನು ತಲೆಯ ಮೇಲೆ ಇರಿಸಿಕೊಂಡು ಮೆರವಣಿಗೆಯಲ್ಲಿ ಸಾಗಿದರು

ಹರಿಹರ: ‘ಹರನ ಉಪಾಸಕರಾದ ವೀರಶೈವ ಲಿಂಗಾಯತ ಪಂಚಮಸಾಲಿಗಳು ಮತ್ತು ಹರಿಯ ಉಪಾಸಕ
ರಾದ ವಾಲ್ಮೀಕಿ ಸಮುದಾಯದವರು ಭಾವನಾತ್ಮಕವಾಗಿ ಒಂದಾಗಿರಬೇಕು. ಈ ಎರಡೂ ಸಮುದಾಯಗಳವರು ಅಸಂಘಟಿತರಾಗಿ ಇರುವಾಗಲೇ 21 ಮಂದಿ ಶಾಸಕರಾಗಿದ್ದಾರೆ. ಈ ಸಂಖ್ಯೆಯನ್ನು 51ಕ್ಕೆ ತಲುಪಿಸಬೇಕು’ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

‘ಪಂಚಮಸಾಲಿಗಳನ್ನು ಬೇರೆಯವರು ಇಲ್ಲಿಯವರೆಗೆ ಬಳಸಿಕೊಂಡರು. ಇನ್ನು ಜಾಗೃತರಾಗಲು ಈ ಜಾತ್ರೆ ಹಮ್ಮಿಕೊಳ್ಳಲಾಗಿದೆ.

‘ಮುಖ್ಯಮಂತ್ರಿ ಯಡಿಯೂರಪ್ಪ ಇತ್ತೀಚೆಗೆ ಯಾಕೋ ಖಡಕ್‌ ನಿರ್ಧಾರ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ’ ಎಂದು ವಿಷಾದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.