ADVERTISEMENT

ರಾಮನಗರ ಜೈಲಿನಲ್ಲೀಗ ಐವರೇ ಕೈದಿಗಳು! ಏಕೆ? ಇಲ್ಲಿದೆ ಮಾಹಿತಿ

ಆರ್.ಜಿತೇಂದ್ರ
Published 19 ಜುಲೈ 2020, 11:09 IST
Last Updated 19 ಜುಲೈ 2020, 11:09 IST
ಜಿಲ್ಲಾ ಕಾರಾಗೃಹವನ್ನು ಸ್ಯಾನಿಟೈಸ್‌ ಮಾಡುತ್ತಿರುವುದು (ಸಂಗ್ರಹ ಚಿತ್ರ)
ಜಿಲ್ಲಾ ಕಾರಾಗೃಹವನ್ನು ಸ್ಯಾನಿಟೈಸ್‌ ಮಾಡುತ್ತಿರುವುದು (ಸಂಗ್ರಹ ಚಿತ್ರ)   

ರಾಮನಗರ: ಪಾದರಾಯನಪುರದ ಗಲಭೆ ಆರೋಪಿಗಳಿಗೆ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ಬಂದ್‌ ಆಗಿದ್ದ ರಾಮನಗರ ಜೈಲು ಬರೋಬ್ಬರಿ ಮೂರು ತಿಂಗಳ ಬಳಿಕ ಮತ್ತೆ ಬಾಗಿಲು ತೆರೆದಿದೆ. ಆದರೆ, ಸದ್ಯಕ್ಕೆ ಐವರು ವಿಚಾರಣಾಧೀನ ಆರೋಪಿಗಳಷ್ಟೇ ಇಲ್ಲಿ ಇದ್ದಾರೆ.

ಜಿಲ್ಲೆಯ ನ್ಯಾಯಾಲಯಗಳಲ್ಲಿ ವಿವಿಧ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಡುವ ವಿಚಾರಣಾಧೀನ ಕೈದಿಗಳನ್ನು ಮಾತ್ರ ಜೈಲಿನೊಳಗೆ ಸೇರಿಸಿಕೊಳ್ಳಲಾಗುತ್ತಿದೆ. ಅದಕ್ಕೆ ಮೊದಲು ಅವರಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತದೆ. ನೆಗೆಟಿವ್‌ ವರದಿ ಬಂದವರನ್ನು ಮಾತ್ರ ಒಳಗೆ ಸೇರಿಸಿಕೊಳ್ಳಲಾಗುತ್ತಿದೆ. ಜೈಲಿನಲ್ಲಿ 30ಕ್ಕೂ ಹೆಚ್ಚು ಸಿಬ್ಬಂದಿ ಇದ್ದು, ಅವರೆಲ್ಲ ಈ ಐವರು ಜೈಲುಹಕ್ಕಿಗಳನ್ನು ಕಾಯತೊಡಗಿದ್ದಾರೆ!

ಬೆಂಗಳೂರಿನ ಪಾದರಾಯನಪುರದಲ್ಲಿ ಕಳೆದ ಏಪ್ರಿಲ್‌ನಲ್ಲಿ ಕೋವಿಡ್-19 ಶಂಕಿತರನ್ನು ಕ್ವಾರಂಟೈನ್ ಮಾಡಲು ಹೋದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂಪೊಲೀಸರ ಮೇಲೆ ಅಲ್ಲಿನ ಕೆಲವರು ಹಲ್ಲೆ ನಡೆಸಿದ್ದರು. ಅಲ್ಲಿ ಬಂಧಿಸ ಲಾದ 121 ಆರೋಪಿಗಳಿಗೆ ಪ್ರತ್ಯೇಕ ವಾಸದ ವ್ಯವಸ್ಥೆ ಮಾಡಿಕೊಡುವ ಸಲುವಾಗಿ ಇಲ್ಲಿದ್ದ ಎಲ್ಲ171 ಕೈದಿ ಗಳನ್ನೂ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರ ಮಾಡಲಾಗಿತ್ತು.

ADVERTISEMENT

ಆದರೆ, ಇಲ್ಲಿಗೆ ಬಂದ ಗಲಭೆ ಆರೋಪಿಗಳಲ್ಲಿ ಆರಕ್ಕೂ ಹೆಚ್ಚು ಮಂದಿ ಯಲ್ಲಿ ಕೋವಿಡ್ ಸೋಂಕು ಕಾಣಿಸಿ ಕೊಂಡಿದ್ದು, ಸೋಂಕಿತರನ್ನು ಆಸ್ಪತ್ರೆಗೆ ಹಾಗೂ ಉಳಿದವರನ್ನು ಹಜ್‌ ಭವನಕ್ಕೆ ಸ್ಥಳಾಂತರ ಮಾಡಲಾಗಿತ್ತು. ಹೀಗಾಗಿ ಇಡೀ ರಾಮನಗರ ಜೈಲು ಖಾಲಿ
ಯಾಯಿತು.

ಆರೋಪಿಗಳ ಸಂಪರ್ಕಕ್ಕೆ ಬಂದ ಕಾರಣ ಜೈಲು ಸಿಬ್ಬಂದಿಯೂ ಕ್ವಾರಂಟೈನ್‌ಗೆ ಒಳಗಾಗಬೇಕಾಯಿತು. ಇವರೊಟ್ಟಿಗೆ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್‌ ಸಿಬ್ಬಂದಿ, ಸ್ವಚ್ಛತೆಗೆಂದು ಬಂದ ನಗರಸಭೆ ಸಿಬ್ಬಂದಿ ಸಹ ಐವತ್ತಕ್ಕೂ ಹೆಚ್ಚು ಮಂದಿ ಕ್ವಾರಂಟೈನ್‌ಗೆ ಒಳಗಾದರು. ಬರೋಬ್ಬರಿ ಎರಡೂ ವರೆ ತಿಂಗಳ ಕಾಲ ಜೈಲು ಖಾಲಿಖಾಲಿ
ಯಾಗಿತ್ತು. ಇದೇ ತಿಂಗಳ ಮೂರರಂದು ಇದರ ಬಾಗಿಲು ತೆರೆದು ಒಬ್ಬೊಬ್ಬರೇ ಖೈದಿಗಳನ್ನು ಒಳಗೆ ಬಿಡ ಲಾಗುತ್ತಿದೆ.

ಈ ಹಿಂದೆ ಈ ಜೈಲಿನಲ್ಲಿದ್ದ ಎಲ್ಲ ಕೈದಿಗಳೂ ಸದ್ಯ ಪರಪ್ಪನ ಅಗ್ರಹಾರದಲ್ಲೇ ಉಳಿದಿದ್ದಾರೆ. ಅವರಿಂದ ಮತ್ತೆ ಸೋಂಕು ಹರಡಿದರೆ ಕಷ್ಟ ಎನ್ನುವ ಕಾರಣಕ್ಕೆ ವಾಪಸ್‌ ಕರೆ
ತರಲು ಜಿಲ್ಲಾಡಳಿತ ಹಾಗೂ ಜೈಲಿನ ಅಧಿಕಾರಿಗಳು ಹಿಂದೇಟು ಹಾಕುತ್ತಿ ದ್ದಾರೆ. ಈ ಕಾರಣಕ್ಕೆ ಜೈಲು ಸದ್ಯ ಖಾಲಿಖಾಲಿಯಾಗಿಯೇ ಉಳಿದಿದೆ.

ಏನಿದರ ವಿಶೇಷ...
ರಾಮನಗರ ಜೈಲಿನಲ್ಲಿ 35 ಮಂದಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2 ಎಕರೆ, 32 ಗುಂಟೆ ಜಮೀನಲ್ಲಿ ಕಟ್ಟಡ ಕಟ್ಟಲಾಗಿದೆ. ಒಟ್ಟು 8 ಸೆಲ್‌ಗಳು ಇವೆ. ಇದರಲ್ಲಿ 6 ಪುರುಷರಿಗೆ ಹಾಗೂ 2 ಮಹಿಳೆಯರಿಗೆ ಮೀಸಲಾಗಿವೆ. ಆದರೆ ಭದ್ರತೆ ಕಾರಣಕ್ಕೆ ಸದ್ಯ ಇಲ್ಲಿ ಮಹಿಳಾ ಕೈದಿಗಳನ್ನು ಇಟ್ಟಿಲ್ಲ. 150 ಜನರಿಗೆ ಇಲ್ಲಿ ವ್ಯವಸ್ಥೆಗೆ ಅವಕಾಶ ಇದೆ.

***

ಇದೇ ತಿಂಗಳ ಮೂರರಿಂದಜೈಲು ಪುನರಾರಂಭಗೊಂಡಿದ್ದು, ಸದ್ಯ ಐದು ಕೈದಿಗಳಷ್ಟೇ ಇದ್ದಾರೆ. ಬೆಂಗಳೂರಿನಲ್ಲಿ ಇರುವ ಕೈದಿಗಳನ್ನು ವಾಪಸ್ ತರಲು ಸರ್ಕಾರದಿಂದ ಸೂಚನೆ ಬಂದಿಲ್ಲ

– ಆಶೇಖಾನ್‌, ಜಿಲ್ಲಾ ಕಾರಾಗೃಹ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.