ಹಾಸನ: ಜಿಲ್ಲೆಯಲ್ಲಿ ಮಂಗಗಳ ಮಾರಣಹೋಮದ ಬೆನ್ನಲ್ಲೇ ಮೂರು ಗಂಡು ನವಿಲುಗಳು ಅನುಮಾನಾಸ್ಪದ ರೀತಿಯಲ್ಲಿ ಅರಸೀಕೆರೆ ತಾಲ್ಲೂಕಿನ ಚಿಕ್ಕ ಗಂಡಸಿಯಲ್ಲಿ ಭಾನುವಾರ ಮೃತಪಟ್ಟಿವೆ.
ಗ್ರಾಮದ ನಂಜೇಗೌಡ ಅವರ ಜಮೀನಿನ ಸಮೀಪವಿರುವ ಹಳ್ಳದ ಬಳಿ ನವಿಲುಗಳ ಕಳೇಬರಗಳು ಪತ್ತೆಯಾಗಿವೆ. ಅರಣ್ಯ ಅಧಿಕಾರಿ ಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
‘ವಿಷ ಹಾಕಿರುವ ಸಾಧ್ಯತೆ ಇದೆ. ಪಶು ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸ ಲಾಗುವುದು. ಅಂಗಾಂಗ ಮಾದರಿ ಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಸವರಾಜ್ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.