ADVERTISEMENT

ಕೋವಿಡ್-19ಗೆ ತುತ್ತಾದರೆ ಪರಿಹಾರ: ಪಿಐಎಲ್

​ಪ್ರಜಾವಾಣಿ ವಾರ್ತೆ
Published 7 ಮೇ 2020, 20:52 IST
Last Updated 7 ಮೇ 2020, 20:52 IST

ಬೆಂಗಳೂರು: ‘ಮಾಧ್ಯಮ ಪ್ರತಿನಿಧಿಗಳು, ಏಜೆಂಟರು ಹಾಗೂ ಪತ್ರಿಕಾ ವಿತರಕರಲ್ಲಿ ಯಾರಾದರೂ ಕೋವಿಡ್- 19ಕ್ಕೆ ತುತ್ತಾಗಿ ಸಾವನ್ನಪ್ಪಿದರೆ ಅಂಥವರಿಗೆ ಸರ್ಕಾರದಿಂದ ₹ 50 ಲಕ್ಷ ಹಾಗೂ ಆಯಾ ಮಾಧ್ಯಮ ಸಂಸ್ಥೆಗಳಿಂದ ತಲಾ ₹ 50 ಲಕ್ಷ ಪರಿಹಾರ ಘೋಷಿಸಲು ನಿರ್ದೇಶಿಸಬೇಕು’ ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ಕೋರಮಂಗಲದ ಜಾಕೊಬ್ ಜಾರ್ಜ್ ಸಲ್ಲಿಸಿರುವ ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

‘ಎಲೆಕ್ಟ್ರಾನಿಕ್, ಮುದ್ರಣ ಮಾಧ್ಯಮ ಪ್ರತಿನಿಧಿಗಳು, ಏಜೆಂಟರು ಮತ್ತು ಪತ್ರಿಕಾ ವಿತರಕರಿಗೆ ಕಡ್ಡಾಯ ಆರೋಗ್ಯ ತಪಾಸಣೆ ‌ನಡೆಸಬೇಕು. ಸೋಂಕು ತಗುಲದಂತೆ ಅವರಿಗೆ ಸೂಕ್ತ ಸಾಧನಗಳನ್ನು ನೀಡಲು ನಿರ್ದೇಶಿಸಬೇಕು’ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.