ADVERTISEMENT

ಕಡಲತೀರಕ್ಕೆ ತೇಲಿಬಂದ ವಿಷಕಾರಿ ಜಲಚರ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 16:16 IST
Last Updated 5 ಜುಲೈ 2019, 16:16 IST
ಕಾರವಾರದ ಕಡಲತೀರದಲ್ಲಿ ಕಾಣಿಸಿಕೊಂಡ ‘ಫೈಸಾಲಿಯಾ ಫೈಸಾಲಿಸ್’
ಕಾರವಾರದ ಕಡಲತೀರದಲ್ಲಿ ಕಾಣಿಸಿಕೊಂಡ ‘ಫೈಸಾಲಿಯಾ ಫೈಸಾಲಿಸ್’   

ಕಾರವಾರ: ಜೆಲ್ಲಿಫಿಶ್ ಮಾದರಿಯ ವಿಷಕಾರಿ ಜಲಚರಗಳಾದ ‘ಫೈಸಾಲಿಯಾ ಫೈಸಾಲಿಸ್’, ನಗರದ ಟ್ಯಾಗೋರ್ ಕಡಲತೀರದ ಉದ್ದಕ್ಕೂ ಶುಕ್ರವಾರ ಕಾಣಿಸಿಕೊಂಡವು. ನೇರಳೆ, ನೀಲಿ ಬಣ್ಣದ ಈ ಜಲಚರ, ನೋಡಲು ಸುಂದರವಾಗಿದ್ದರೂ ವಿಷಕಾರಿ.ಇದನ್ನು ಮುಟ್ಟಿದರೆ ಮೀನುಗಳು ಸಾಯುತ್ತವೆ. ಮನುಷ್ಯರಿಗೂ ಇದು ಅಪಾಯಕಾರಿಎಂದು ಕಡಲ ವಿಜ್ಞಾನಿಗಳುತಿಳಿಸಿದ್ದಾರೆ.

ಶುಕ್ರವಾರ ಸಂಜೆ ಕಡಲತೀರಕ್ಕೆ ತೆರಳಿದ್ದ ಇಲ್ಲಿನ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಈ ಜಲಚರವನ್ನು ಗುರುತಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ, ‘ಈ ಜಲಚರ ಬಹಳ ವಿಷಕಾರಿ. ಇದರ ವಿಷ ತಾಗಿದರೆ ಮನುಷ್ಯರಿಗೆ ವಾಂತಿ, ತುರಿಕೆ, ಕಜ್ಜಿಹಾಗೂ ನರ ದೌರ್ಬಲ್ಯವೂ ಉಂಟಾಗಬಹುದು. ವಿಷದ ಪ್ರಮಾಣ ಹೆಚ್ಚಾದರೆ ಸ್ಪರ್ಶಿಸಿದವರು ಸಾಯುವಅಪಾಯವೂಇದೆ. ಹಾಗಾಗಿ ಅದನ್ನು ಯಾವುದೇ ಕಾರಣಕ್ಕೂ ಸ್ಪರ್ಶಿಸಲೇಬಾರದು’ ಎಂದು ಅವರುಎಚ್ಚರಿಕೆ ನೀಡಿದ್ದಾರೆ.

ADVERTISEMENT

‘ಬಹಳ ಸುಂದರವಾಗಿಈ ಜಲಚರ ಗೋಚರಿಸುತ್ತದೆ. ಆಳಸಮುದ್ರದಲ್ಲಿ ಸಾಮಾನ್ಯವಾಗಿರುವ ಇವು, ದೊಡ್ಡ ಅಲೆಗಳೊಂದಿಗೆ ತೀರಕ್ಕೆ ಬಂದಿರಬಹುದು’ ಎಂದು ಊಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.