ADVERTISEMENT

ಸಚಿವನ ಮಗನಿಂದ ಅಪಘಾತ ಆರೋಪ | ತರಾತುರಿಯಲ್ಲಿ ನಡೆದಿತ್ತೇ ಮರಣೋತ್ತರ ಪರೀಕ್ಷೆ?

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 6:35 IST
Last Updated 14 ಫೆಬ್ರುವರಿ 2020, 6:35 IST
   

ಹೊಸಪೇಟೆ: ಹೊಸಪೇಟೆಯ ಮರಿಯಮ್ಮನಹಳ್ಳಿಬಳಿ ಸಚಿವರ ಮಗನೊಬ್ಬನಿಂದ ನಡೆದಿತ್ತು ಎನ್ನಲಾದ ಅಪಘಾತದಲ್ಲಿಕಾರಿನಲ್ಲಿದ್ದ ಐವರ ಪೈಕಿ ಸಚಿನ್‌ ಎಂಬುವವರೂ ಮೃತಪಟ್ಟಿದ್ದರು. ಅವರ ಮರಣೋತ್ತರ ಪರೀಕ್ಷೆಯನ್ನು ತರಾತುರಿಯಲ್ಲಿ ನಡೆಸಿ, ಶವವನ್ನು ಬೇಗ ಕಳುಹಿಸಿಕೊಟ್ಟಿರುವುದು ಗೊತ್ತಾಗಿದೆ.

‘ಸಚಿವ ಆರ್‌. ಅಶೋಕ್‌ ಕಡೆಯವರು ಎಂದಿದ್ದಕ್ಕೆ ತಕ್ಷಣವೇ ಅಪಘಾತದಲ್ಲಿ ಗಾಯಗೊಂಡಿದ್ದ ಎಲ್ಲರಿಗೂ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದೆವು. ಸಚಿನ್‌ ಅವರ ಮೃತದೇಹವನ್ನು ಬೇಗ ಬೆಂಗಳೂರಿಗೆ ತೆಗೆದುಕೊಂಡು ಹೋಗಬೇಕು ಎಂದು ಒತ್ತಡ ಹೇರಿದ್ದಕ್ಕೆ ರಾತ್ರಿಯೇ ಮರಣೋತ್ತರ ಪರೀಕ್ಷೆ ಮಾಡಿ ಕಳುಹಿಸಿಕೊಟ್ಟೆವು. ರಾಕೇಶ್‌ ಎಂಬುವರ ಬೆನ್ನು ಮೂಳೆ ಮುರಿದರೆ, ಶಿವಕುಮಾರ, ರಾಹುಲ್‌ ಹಾಗೂ ವರುಣ್‌ಗೆ ಸಣ್ಣ ಗಾಯಗಳಾಗಿದ್ದವು. ಎಲ್ಲರಿಗೂ ಪ್ರಾಥಮಿಕ ಚಿಕಿತ್ಸೆ ನೀಡಿದ್ದೆವು. ಬೆಳಿಗ್ಗೆ ಹೋಗುವಂತೆ ತಿಳಿಸಿದ್ದರೂ ಅವರು ರಾತ್ರಿಯೇ ಅವಸರದಲ್ಲಿ ಹೊರಟು ಹೋದರು’ ಎಂದು ಡಾ. ಮಹಾಂತೇಶ್‌ ತಿಳಿಸಿದ್ದಾರೆ.

ಇದರೊಂದಿಗೆ, ಮರಣೋತ್ತರ ಪರೀಕ್ಷೆಯನ್ನು ತರಾತುರಿಯಲ್ಲಿ ನಡೆಸಲಾಗಿತ್ತೇ ಎಂಬ ಅನುಮಾನ ಮೂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.