ADVERTISEMENT

ಅಂಚೆ ಜೀವವಿಮೆ: ಪ್ರತಿನಿಧಿ ನೇಮಕ ಡಿ.30 ನೇರ ಸಂದರ್ಶನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 15:40 IST
Last Updated 25 ಡಿಸೆಂಬರ್ 2024, 15:40 IST
   

ಬೆಂಗಳೂರು: ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಜೀವ ವಿಮೆ ಪಾಲಿಸಿಗಳನ್ನು ಮಾರಾಟ ಮಾಡಲು ಪ್ರತಿನಿಧಿಗಳ ನಿಯುಕ್ತಿಗಾಗಿ ಅಂಚೆ ಇಲಾಖೆಯು ಇದೇ 30 ರಂದು ಬೆಳಿಗ್ಗೆ 11ಕ್ಕೆ ಅಭ್ಯರ್ಥಿಗಳ ನೇರ ಸಂದರ್ಶನ ಏರ್ಪಡಿಸಿದೆ.

ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರಗಳೊಂದಿಗೆ ಸ್ವವಿವರ, ಶೈಕ್ಷಣಿಕ ಪ್ರಮಾಣ ಪತ್ರದ ನಕಲು ಪ್ರತಿಗಳೊಂದಿಗೆ ಮಹಾಲಕ್ಷ್ಮಿಪುರ ಪೊಲೀಸ್‌ ಠಾಣೆ ಬಳಿ ಇರುವ ಬೆಂಗಳೂರು ಪಶ್ಚಿಮ ಅಂಚೆ ವಿಭಾಗ, ವರಿಷ್ಠ ಅಂಚೆ ಅಧೀಕ್ಷಕರ ಕಾರ್ಯಾಲಯ, ಬೆಂಗಳೂರು ಇಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು ಎಂದು ಪ್ರಕಟಣೆ ತಿಳಿಸಿದೆ.

ನಿರುದ್ಯೋಗಿಗಳು, ಸ್ವಯಂ ಉದ್ಯೋಗಿಗಳು, ಮಾಜಿ ಸೈನಿಕರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿಗಳ ಮಾಜಿ ಸದಸ್ಯರು ಮತ್ತು ಇತರರು ಭಾಗವಹಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳು ರಾಷ್ಟ್ರೀಯ ಉಳಿತಾಯ ಪತ್ರದ ರೂಪದಲ್ಲಿ ₹5,000 ಭದ್ರತಾ ಠೇವಣಿ ಇಡಬೇಕು. ಅಭ್ಯರ್ಥಿಗಳಿಗೆ ವ್ಯವಹಾರಕ್ಕೆ ತಕ್ಕಂತೆ ಕಮಿಷನ್‌ ನೀಡಲಾಗುವುದು. ವಿವರಗಳಿಗೆ 9886854974 ಸಂಖ್ಯೆಗೆ ಸಂಪರ್ಕಿಸುವುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.