ADVERTISEMENT

‘ಪ್ರಜಾವಾಣಿ’ ಕ್ವಿಜ್‌; ಜ.24ಕ್ಕೆ ಫೈನಲ್‌

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 17:03 IST
Last Updated 23 ಜನವರಿ 2019, 17:03 IST
ಪ್ರಜಾವಾಣಿ ಕ್ವಿಜ್‌
ಪ್ರಜಾವಾಣಿ ಕ್ವಿಜ್‌   

ಬೆಂಗಳೂರು: ‘ಪ್ರಜಾವಾಣಿ’ಕ್ವಿಜ್‌ ಚಾಂಪಿಯನ್‌ಷಿಪ್‌ನ 5ನೇ ಆವೃತಿಯ ಅಂತಿಮ ಹಂತದ ಸ್ಪರ್ಧೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜ.24ರಂದು ನಡೆಯಲಿದೆ.

ಮೈಸೂರು, ಹಾಸನ, ಮಂಗಳೂರು, ಧಾರವಾಡ, ವಿಜಯಪುರ, ಕಲಬುರ್ಗಿ, ರಾಯಚೂರು, ದಾವಣಗೆರೆ, ತುಮಕೂರಿನಲ್ಲಿ ನಡೆದ ವಲಯಮಟ್ಟದ ಸ್ಪರ್ಧೆಗಳಲ್ಲಿ ವಿಜೇತ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ.

ಈ ಸ್ಪರ್ಧೆಯನ್ನು ಪ್ರಸ್ತುತಪಡಿಸುವ ಪ್ರಾಯೋಜಕರಾಗಿ ಆಗಿ ‘ದೀಕ್ಷಾ’ ಸಂಸ್ಥೆ ಹಾಗೂ ಬ್ಯಾಂಕಿಂಗ್‌ ಭಾಗಿದಾರರಾಗಿ ‘ಕೆನರಾ ಬ್ಯಾಂಕ್‌’ ಸಹಯೋಗ ನೀಡಿವೆ.

ADVERTISEMENT

ಬೆಂಗಳೂರು ವಲಯ ಸ್ಪರ್ಧೆ: ಜ.24ರಂದೇ ಬೆಂಗಳೂರು ವಲಯ ಮಟ್ಟದ ಸ್ಪರ್ಧೆ ನಡೆಯಲಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಬಹುದು. ಜ್ಞಾನಜ್ಯೋತಿ ಸಭಾಂಗಣದಲ್ಲಿ ಸ್ಪರ್ಧೆ ನಡೆಯಲಿದೆ. ನೋಂದಾಯಿತ ಮಕ್ಕಳಿಗೆ 20 ಪ್ರಶ್ನೆಗಳ ಕಿರುಪರೀಕ್ಷೆ ನಡೆಸಿ, ಪ್ರಶ್ನೋತ್ತರ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ.

ಜ.22ರಂದು ತುಮಕೂರಿನಲ್ಲಿ ನಡೆಯಬೇಕಿದ್ದ ತುಮಕೂರು ವಲಯ ಮಟ್ಟದ ಸ್ಪರ್ಧೆ, ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಅವರ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಆ ಸ್ಪರ್ಧೆಯು 24ರಂದು ಬೆಳಿಗ್ಗೆ ಇದೇ ಸಭಾಂಗಣದಲ್ಲಿ ನಡೆಯಲಿದೆ. ನೋಂದಾಯಿತ ಮಕ್ಕಳಿಗೆ 20 ಪ್ರಶ್ನೆಗಳ ಕಿರುಪರೀಕ್ಷೆ ನಡೆಸಿ, ಪ್ರಶ್ನೋತ್ತರ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ.

ಬೆಳಿಗ್ಗೆ 8.30ಕ್ಕೆ ನೋಂದಣಿ ಪ್ರಕ್ರಿಯೆ ಶುರುವಾಗಲಿದೆ. ಬೆಳಿಗ್ಗೆ 9.30ಕ್ಕೆ ಸ್ಪರ್ಧೆ ಆರಂಭವಾಗಲಿದೆ.

ಹೆಚ್ಚಿನ ಮಾಹಿತಿಗೆ 080–25880199

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.