ADVERTISEMENT

ಪ್ರಕಾಶ್ ರಾಠೋಡ್ ಪ್ರಕರಣ: ನೀತಿ ನಿರೂಪಣಾ ಸಮಿತಿಗೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 7:43 IST
Last Updated 1 ಫೆಬ್ರುವರಿ 2021, 7:43 IST
   

ಬೆಂಗಳೂರು:ಕಾಂಗ್ರೆಸ್ ಶಾಸಕ ಪ್ರಕಾಶ್ ರಾಠೋಡ್ ಅವರು ಶುಕ್ರವಾರ ವಿಧಾನ ಪರಿಷತ್ ಕಲಾಪದ ವೇಳೆ ಸದನದೊಳಗೆ ಮೊಬೈಲ್ ನಲ್ಲಿ ಅಶ್ಲೀಲ ಫೋಟೊ ವೀಕ್ಷಿಸುತ್ತಿದ್ದರು ಎಂಬ ಆರೋಪದ‌ ಸತ್ಯಾಸತ್ಯತೆ ಪರಿಶೀಲಿಸಲು ಪ್ರಕರಣವನ್ನು ವಿಧಾನ ಪರಿಷತ್ತಿನ ನೀತಿ ನಿರೂಪಣಾ ಸಮಿತಿಗೆ ವಹಿಸಲಾಗಿದೆ.

ರಾಠೋಡ್ ಅವರು ಶುಕ್ರವಾರ ಕಲಾಪದ ವೇಳೆ ಮೊಬೈಲ್ ಗ್ಯಾಲರಿ ನೋಡುತ್ತಿದ್ದುದನ್ನು ಸೆರೆ ಹಿಡಿದಿದ್ದ ಸುದ್ದಿ ವಾಹಿನಿಗಳು, ಅಶ್ಲೀಲ ಚಿತ್ರ ವೀಕ್ಷಣೆಯ ಆರೋಪ ಮಾಡಿದ್ದವು. ಪ್ರಕಾಶ್ ರಾಠೋಡ್ ಆರೋಪ ನಿರಾಕರಿಸಿದ್ದರು.

ಸೋಮವಾರ ಕಲಾಪ‌ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, 'ಸದಸ್ಯರೊಬ್ಬರು ಕಲಾಪದ‌ ವೇಳೆ ಮೊಬೈಲ್ ನಲ್ಲಿ ಕೆಲವು ದೃಶ್ಯಗಳನ್ನು ವೀಕ್ಷಿಸಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಸತ್ಯಾಸತ್ಯತೆ ಪರಿಶೀಲಿಸಲು ಪ್ರಕರಣವನ್ನು ನೀತಿ ನಿರೂಪಣಾ ಸಮಿತಿಗೆ ವಹಿಸಲಾಗಿದೆ' ಎಂದು ಪ್ರಕಟಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.