ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಾಡಿರುವ ಸಿದ್ಧತೆಗಳು

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 8:08 IST
Last Updated 24 ಜೂನ್ 2020, 8:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಲಾಕ್‍ಡೌನ್ ಅವಧಿಯಲ್ಲಿ ಸರ್ಕಾರಿ ಮತ್ತು ಖಾಸಗಿ ವಸತಿ ನಿಲಯದಲ್ಲಿ ತಂಗಿದ್ದ ವಿದ್ಯಾರ್ಥಿಗಳು, ನಗರ ಪ್ರದೇಶದಲ್ಲಿ ತಾತ್ಕಾಲಿಕವಾಗಿ ವಾಸವಾಗಿದ್ದವಲಸೆ ಕಾರ್ಮಿಕರಮಕ್ಕಳು ತಮ್ಮ ಊರಗಳಿಗೆ ವಾಪಸ್ ತೆರಳಿರುತ್ತಾರೆ. ಇಂತಹ ವಿದ್ಯಾರ್ಥಿಗಳು ತಾವು ವಾಸವಿರುವ ಸ್ಥಳಕ್ಕೆ ಹತ್ತಿರದ ಪರೀಕ್ಷೆ ಕೇಂದ್ರದಿಂದ ಪರೀಕ್ಷೆಬರೆಯಲು ಪರೀಕ್ಷಾ ಕೇಂದ್ರದ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. 12,674 ವಿದ್ಯಾರ್ಥಿಗಳು ಕೇಂದ್ರ ಬದ ಲಾವಣೆಮಾಡಿಕೊಂಡಿದ್ದಾರೆ.

ರಾಜ್ಯಾದ್ಯಂತ ಒಟ್ಟು 34 ಜಿಲ್ಲಾ ಕೇಂದ್ರಗಳಲ್ಲಿ ಮತ್ತು 204 ತಾಲ್ಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ.

ಪ್ರತಿ ಪರೀಕ್ಷಾ ಕೇಂದ್ರದಲ್ಲಿ 200 ಮಕ್ಕಳಿಗೆ ಒಂದರಂತೆ 3,209 (2,879 + 330 ಬ್ಲಾಕ್ ಸೆಂಟರ್‌ಗಳು) ಕೇಂದ್ರಗಳಿಗೆ ಒಟ್ಟಾರೆ 5,755 ‘ಆರೋಗ್ಯ ತಪಾಸಣಾ ಕೌಂಟರ್ಗಳನ್ನುಪರೀಕ್ಷಾ ಕೇಂದ್ರದ ಮುಖ್ಯದ್ವಾರದಲ್ಲಿಸ್ಥಾಪಿಸಲಾಗಿದೆ.ಪ್ರತಿ ವಿದ್ಯಾರ್ಥಿಗೆ ತಲಾ 2 ರಂತೆ ರಾಜ್ಯಾದ್ಯಾಂತ ಒಟ್ಟು18 ಲಕ್ಷ ಮುಖಗವಸುಗಳನ್ನು ಉಚಿತವಾಗಿ ನೀಡಲಾಗಿದೆ.ಆರೋಗ್ಯ ತಪಾಸಣಾ ಕೌಂಟರ್‌ನಲ್ಲಿ ಪರೀಕ್ಷೆಪ್ರತಿ ಕೊಠಡಿ ಪ್ರವೇಶಿಸುವ ಮೊದಲು ಸ್ಯಾನಿಟೈಸರ್ ನೀಡುವ ವ್ಯವಸ್ಥೆ200 ವಿದ್ಯಾರ್ಥಿಗೊಂದರಂತೆ ‘ಥರ್ಮಲ್ ಸ್ಕ್ಯಾನರ್’ಗಳನ್ನು ಪರೀಕ್ಷಾ ಕೇಂದ್ರಗಳಿಗೆ ಪೂರೈಸಲಾಗಿದೆ.ಪರೀಕ್ಷಾ ಕೇಂದ್ರಗಳಿಗೆ ಇಬ್ಬರಂತೆ ಕಿರಿಯ ಆರೋಗ್ಯ ಸಹಾಯಕರು ಅಥವಾ ಆಶಾ ಕಾರ್ಯಕರ್ತರ ಸೇವೆಯನ್ನು ಆರೋಗ್ಯ ಇಲಾಖೆಯಿಂದ ಒದಗಿಸಲಾಗಿದೆ.

ADVERTISEMENT

ಸ್ಕೌಟ್ಸ್ ಅಂಡ್ ಗೈಡ್ಸ್ ಸ್ವಯಂಸೇವಕರ ಸೇವೆ ಒದಗಿಸಲಾಗಿದೆ.ಒಂದು ವೇಳೆ ಯಾವುದಾದರೂ ವಿದ್ಯಾರ್ಥಿಯು ಕೆಮ್ಮು/ನೆಗಡಿ/ಜ್ವರ ಮೊಲಾದವುಗಳಿಂದ ಬಳಲುತ್ತಿದ್ದಲ್ಲಿ,ಅದೇ ಪರೀಕ್ಷಾ ಕೇಂದ್ರದಲ್ಲಿ ‘ವಿಶೇಷ ಕೊಠಡಿ’ಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗುವುದು.

ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಕನಿಷ್ಠಒಂದು ಮೀಟರ್ ದೈಹಿಕ ಅಂತರ ಕಾಪಾಡಿಕೊಳ್ಳುವಂತೆಪ್ರತಿ ಕೊಠಡಿಯಲ್ಲಿ ಒಂದು ಬೆಂಚಿಗೆ ಇಬ್ಬರು ಮಾತ್ರ ಹಾಗೂ ಕೊಠಡಿಯಲ್ಲಿ ಗರಿಷ್ಠ 18 ರಿಂದ20 ಮಕ್ಕಳಿರುವಂತೆ ಆಸನ ವ್ಯವಸ್ಥೆ ಮಾಡಲಾಗಿದೆ.

ಎರಡು ಡೆಸ್ಕ್ಗಳ ನಡುವೆ ಕನಿಷ್ಠಒಂದು ಮೀಟರ್ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆಮಾಡಲಾಗಿದೆ.

ಕಂಟೈನ್ಮೆಂಟ್ ವಲಯಗಳಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಮತ್ತು ಇಂತಹ ಮಗುವಿಗೆ ಹಾಗೂ ಈ ವಿಶೇಷ ಕೊಠಡಿಯಲ್ಲಿಕಾರ್ಯನಿರ್ವಹಿಸುವ ಕೊಠಡಿಯಲ್ಲಿ ಮೇಲ್ವಿಚಾರಕರಿಗೆ ಆರೋಗ್ಯ ಇಲಾಖೆಯಿಂದ ಎನ್ 95 ಮಾಸ್ಕ್ ಒದಗಿಸಲಾಗುವುದು.

ಒಂದು ವೇಳೆ ಯಾವುದೇ ವಿದ್ಯಾರ್ಥಿಗೆ ಕೋವಿಡ್-19 ಪಾಸಿಟಿವ್ ಪ್ರಕರಣವಿದ್ದಲ್ಲಿ ಅಥವಾಕ್ವಾರಂಟೈನ್‍ನಲ್ಲಿರುವ ವಿದ್ಯಾರ್ಥಿಗೆ ಪೂರಕ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗುವುದು ಹಾಗೂಇದನ್ನು ‘ಪ್ರಥಮ ಅವಕಾಶ’ಎಂದು ಪರಿಗಣಿಸಲಾಗುವುದು.

ಪ್ರತಿ ತಾಲ್ಲೂಕಿನ ಕೇಂದ ಸ್ಥಾನ ಮತ್ತು ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ಕನಿಷ್ಠಎರಡು ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ, ಅವುಗಳನ್ನು ‘ಕಾಯ್ದಿರಿಸಿದ ಪರೀಕ್ಷಾ ಕೇಂದ್ರ’ಗಳಾಗಿ ಇಡಲಾಗಿದೆ.

ಕೋವಿಡ್-19 ಪಾಸಿಟೀವ್ ಪ್ರಕರಣಗಳು ವರದಿಯಾಗಿ, ಯಾವುದೇ ಪರೀಕ್ಷಾ ಕೇಂದ್ರ ಕಂಟೈನ್‍ಮೆಂಟ್ವಲಯದೊಳಗೆ ಬಂದರೆ, ಆಗ ಆ ಪರೀಕ್ಷಾ ಕೇಂದ್ರವನ್ನು ಈಗಾಗಲೇ ಗುರುತಿಸಿರುವ ‘ಕಾಯ್ದಿರಿಸಿದಪರೀಕ್ಷಾ ಕೇಂದ್ರ’ಕ್ಕೆ ಸ್ಥಳಾಂತರಿಲಾಗುವುದು. ಯಾವುದೇ ಪರೀಕ್ಷಾ ಕೇಂದ್ರ ಕಂಟೈನ್‍ಮೆಂಟ್ವಲಯದಲ್ಲಿ ಯಾವತ್ತೂ ಇರದಂತೆ ನೋಡಿಕೊಳ್ಳಲಾಗುವುದು.

ಹೊರ ರಾಜ್ಯದಿಂದ ಪರೀಕ್ಷೆಬರೆಯಲು ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಅವಕಾಶವಿರುವ ವಸತಿ ವ್ಯವಸ್ಥೆ/ಸಾರಿಗೆ ವ್ಯವಸ್ಥೆ/ಪ್ರತೀ ದಿವಸ ಗಡಿಯನ್ನು ದಾಟಲು ಬೇಕಿರುವ ಸೂಕ್ತ ಅನುಮತಿ ಪತ್ರ ದೊರಕುವಂತೆ ರಾಜ್ಯದ ಗಡಿ ಜಿಲ್ಲೆಗಳ ಡಿಡಿಪಿಐಗಳುಎಲ್ಲಾ ಕ್ರಮಗಳನ್ನು ಕೈಗೊಂಡಿರುತ್ತಾರೆ.

ತಾಲ್ಲೂಕು ಹಂತದಲ್ಲಿ ತುರ್ತು ಸಂದರ್ಭಕ್ಕಾಗಿ ಆರೋಗ್ಯ ಇಲಾಖೆ ವತಿಯಿಂದ ಒಂದು ವಾಹನ ಸಿದ್ಧಪಡಿಸಿ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.