ಮೈಸೂರು: ಖಾಸಗಿ ಆಸ್ಪತ್ರೆಯೊಂದರ ಸರ್ವರ್ ಅನ್ನು ಹ್ಯಾಕ್ ಮಾಡಿ, ಬಿಟ್‌ಕಾಯಿನ್ ರೂಪದಲ್ಲಿ ಹಣ ನೀಡಲು ಹ್ಯಾಕರ್‌ಗಳು ಬ್ಲಾಕ್‌ಮೇಲ್ ಮಾಡಿರುವ ಕುರಿತು ಇಲ್ಲಿನ ನಗರ ಸೈಬರ್, ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹ್ಯಾಕರ್‌ಗಳು ಮೊದಲಿಗೆ ಸರ್ವರ್ ಅನ್ನು ಹ್ಯಾಕ್ ಮಾಡಿ ದತ್ತಾಂಶ ತಿರುಚಿದರು. ಬಿಟ್‌ಕಾಯಿನ್ ರೂಪದಲ್ಲಿ ಹಣ ನೀಡಿದರೆ ತಿರುಚಿದ ದತ್ತಾಂಶಗಳನ್ನು ಮೊದಲಿನ ಸ್ಥಿತಿಗೆ ತರಲಾಗುವುದು ಎಂದು ಇ–ಮೇಲ್ ಕಳುಹಿಸಿದರು. ಆದರೆ, ದತ್ತಾಂಶಗಳನ್ನು ಆಸ್ಪತ್ರೆಯವರು ಹಾರ್ಡ್‌ಡಿಸ್ಕ್‌ನಲ್ಲಿ ಇರಿಸಿಕೊಂಡಿದ್ದರಿಂದ ನಷ್ಟವಾಗಿಲ್ಲ.
‘ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ’ ಹ್ಯಾಕರ್‌ಗಳ ಇ–ಮೇಲ್ ಐಡಿಯ ಡೊಮೈನ್ ಪತ್ತೆ ಹಚ್ಚುವ ಕಾರ್ಯ ನಡೆದಿದೆ’ ಎಂದು ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.