ADVERTISEMENT

ರೈತರಿಗೆ ನೇರ ನಗದು ಒದಗಿಸಿ

ಪರಿಷತ್‌ನಲ್ಲಿ ಬಸವರಾಜ ಪಾಟೀಲ್‌ ಇಟಗಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 15:53 IST
Last Updated 23 ಮಾರ್ಚ್ 2021, 15:53 IST
ಬಸವರಾಜ ಪಾಟೀಲ್ ಇಟಗಿ
ಬಸವರಾಜ ಪಾಟೀಲ್ ಇಟಗಿ   

ಬೆಂಗಳೂರು: ಕೃಷಿ ಮತ್ತು ಸಂಬಂಧಿತ ಇಲಾಖೆಗಳಲ್ಲಿ ಯಂತ್ರೋಪಕರಣ, ಸಲಕರಣೆಗಳ ಖರೀದಿಗೆ ಸಹಾಯಧನ ನೀಡುವ ಯೋಜನೆಗಳನ್ನು ಕೈಬಿಟ್ಟು ನೇರವಾಗಿ ರೈತರಿಗೆ ನಗದು ರೂಪದ ನೆರವು ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಕಾಂಗ್ರೆಸ್‌ನ ಬಸವರಾಜ ಪಾಟೀಲ್ ಇಟಗಿ ಮಂಗಳವಾರ ಆಗ್ರಹಿಸಿದರು.

ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ‘ಯಂತ್ರೋಪಕರಣ ಖರೀದಿಗೆ ರೈತರಿಗೆ ಸಹಾಯಧನ ನೀಡುವ ಯೋಜನೆಗಳ ಮೂಲಕ ಸರ್ಕಾರದ ಹಣ ದಲ್ಲಾಳಿಗಳ ಪಾಲಾಗುತ್ತಿದೆ. ಇಂತಹ ಯಾವ ಯೋಜನೆಯೂ ರೈತರಿಗೆ ಬೇಕಿಲ್ಲ. ಈ ಎಲ್ಲ ಯೋಜನೆಗಳನ್ನು ರದ್ದು ಮಾಡಿ, ಪ್ರತಿ ಎಕರೆ ಜಮೀನಿನ ವ್ಯವಸಾಯದ ವೆಚ್ಚದ ಒಂದು ಪಾಲನ್ನು ರೈತರ ಖಾತೆಗೆ ವರ್ಗಾಯಿಸುವ ವ್ಯವಸ್ಥೆ ಆದರೆ ಅವರಿಗೆ ಶಕ್ತಿ ತುಂಬಲು ಸಾಧ್ಯ’ ಎಂದರು.

ಸಾಮೂಹಿಕ ಹನಿ ನೀರಾವರಿ ಯೋಜನೆಗಳನ್ನು ಸ್ಥಗಿತಗೊಳಿಸಬೇಕು. ಅವುಗಳಿಂದ ನಿರೀಕ್ಷಿತ ಫಲಿತಾಂಶ ದೊರಕಿಲ್ಲ. ಜಮೀನುಗಳ ಸಮೀಪದಲ್ಲಿ ಕೊಳಗಳನ್ನು ನಿರ್ಮಿಸಿ, ಅಲ್ಲಿಗೆ ನೀರು ಪೂರೈಸಬೇಕು. ಅಲ್ಲಿಂದ ರೈತರೇ ಜಮೀನಿಗೆ ನೀರು ಸಾಗಿಸುವ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.