ADVERTISEMENT

ಪಿಯು ಮಾದರಿ ಪ್ರಶ್ನೆ ಪತ್ರಿಕೆ: ಮಂಡಳಿ ವಿವರಣೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 18:46 IST
Last Updated 9 ಫೆಬ್ರುವರಿ 2019, 18:46 IST

ಬೆಂಗಳೂರು:ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಲೆಕ್ಕಶಾಸ್ತ್ರ ವಿಷಯದ ಮಾದರಿ ಪ್ರಶ್ನೆ ಪತ್ರಿಕೆಯಲ್ಲಿನ ಅಂಕ ಕ್ರಮದ ಕುರಿತು ಪದವಿ ಪೂರ್ವ ಶಿಕ್ಷಣ ಮಂಡಳಿ ವಿವರ ನೀಡಿದೆ.

ಪ್ರಶ್ನೆ ಪತ್ರಿಕೆಯ ‘ಎ’ ವಿಭಾಗದಲ್ಲಿ1 ಅಂಕದ 10 ಪ್ರಶ್ನೆಗಳಿರುತ್ತವೆ, (ಬಿಟ್ಟ ಸ್ಥಳ ಭರ್ತಿ ಮಾಡಿ–2, ಬಹು ಆಯ್ಕೆ ಪ್ರಶ್ನೆ–2, ಸರಿ/ತಪ್ಪು–1, ವಿಸ್ತರಣೆ–1, ಉದಾಹರಣೆ–1 ಲಘು, ಉತ್ತರ–3 ಪ್ರಶ್ನೆಗಳು). ಇದರಲ್ಲಿ 8 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ‘ಬಿ’ ವಿಭಾಗದಲ್ಲಿ 2 ಅಂಕದ 8 ಪ್ರಶ್ನೆಗಳು ಇರುತ್ತವೆ. ಅದರಲ್ಲಿ 5 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ‘ಸಿ’ ವಿಭಾಗದಲ್ಲಿ 6 ಅಂಕದ 7 ಪ್ರಶ್ನೆಗಳಿರಲಿದ್ದು, 4 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ‘ಡಿ’ ವಿಭಾಗದಲ್ಲಿ 12 ಅಂಕದ 7 ಪ್ರಶ್ನೆಗಳು ಇರುತ್ತವೆ. ಅದರಲ್ಲಿ 4 ಪ್ರಶ್ನೆಗಳಿಗೆ ಉತ್ತರಿಸಬೇಕಾಗಿರುತ್ತದೆ. ‘ಇ’ ವಿಭಾಗದಲ್ಲಿ 5 ಅಂಕದ 3 ಪ್ರಶ್ನೆಗಳಿರಲಿದ್ದು, 2 ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT