ADVERTISEMENT

ಹೈ–ಕ ಉಪನ್ಯಾಸಕರಿಗೆ ಇಂದು ಕೌನ್ಸೆಲಿಂಗ್

ಪಿಯು ಉಪನ್ಯಾಸಕರ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 16:32 IST
Last Updated 5 ಆಗಸ್ಟ್ 2020, 16:32 IST

ಬೆಂಗಳೂರು: ‘ಸಿ’ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರಿಗೆವಿಶೇಷ ಪ್ರಕರಣದಡಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಿರುವ ಪದವಿಪೂರ್ವ ಶಿಕ್ಷಣ ಇಲಾಖೆಯು, ಹೈದರಾಬಾದ್‌ ಕರ್ನಾಟಕ ಭಾಗದ ಉಪನ್ಯಾಸಕರಿಗೆ ಗುರುವಾರ ಕೌನ್ಸೆಲಿಂಗ್‌ ನಡೆಸಲಿದೆ.

ಹೈದರಾಬಾದ್‌ ಕರ್ನಾಟಕದಲ್ಲಿ 11 ವಿಷಯಗಳ ಮತ್ತು ಹೈದರಾಬಾದ್ ಕರ್ನಾಟಕೇತರ ಪ್ರದೇಶಗಳಲ್ಲಿ 4 ವಿಷಯಗಳ ‘ಸಿ’ ವಲಯದ ಉಪನ್ಯಾಸಕರಿಗೆ ಅವಕಾಶ ನೀಡಲಾಗಿದೆ. ಗುರುವಾರ ಹೈ–ಕ ಭಾಗದ ಕನ್ನಡ, ಸಮಾಜಶಾಸ್ತ್ರ ಮತ್ತು ರಸಾಯನವಿಜ್ಞಾನದ ಉಪನ್ಯಾಸಕರು ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದು. ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಕೌನ್ಸೆಲಿಂಗ್ ನಡೆಯಲಿದೆ ಎಂದು ಇಲಾಖೆ ಹೇಳಿದೆ. ಕೌನ್ಸೆಲಿಂಗ್‌ಗೆ ಆಯ್ಕೆಯಾಗಿರುವ ಮತ್ತು ತಿರಸ್ಕೃತಗೊಂಡಿರುವ ಉಪನ್ಯಾಸಕರ ಪಟ್ಟಿಯನ್ನು ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

‘ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ, ಈ ಭಾಗದವರಲ್ಲದ ಉಪನ್ಯಾಸಕರು ಏಳೆಂಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಹೈ–ಕ ಮೀಸಲಾತಿ ಪಡೆದು ಇವರು ನೇಮಕಗೊಂಡಿಲ್ಲ. ಅನಿವಾರ್ಯ ಕಾರಣಗಳಿಂದ ಸ್ಥಳ ಆಯ್ಕೆ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಹೈ–ಕ ಭಾಗದವರಲ್ಲದ ಉಪನ್ಯಾಸಕರಿಗೂ ವರ್ಗಾವಣೆಗೆ ಅವಕಾಶ ನೀಡಬೇಕು’ ಎಂದು ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.