ADVERTISEMENT

ದ್ವಿತೀಯ ಪಿಯು ಪರೀಕ್ಷೆ–2: ಫಲಿತಾಂಶ ಪ್ರಕಟ; 60,692 ಮಂದಿ ತೇರ್ಗಡೆ

​ಪ್ರಜಾವಾಣಿ ವಾರ್ತೆ
Published 16 ಮೇ 2025, 11:45 IST
Last Updated 16 ಮೇ 2025, 11:45 IST
   

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ–2 ಫಲಿತಾಂಶ ಶುಕ್ರವಾರ ಪ್ರಟಕವಾಗಿದ್ದು, ಪರೀಕ್ಷೆ ತೆಗೆದುಕೊಂಡಿದ್ದ 1.94 ಲಕ್ಷ ವಿದ್ಯಾರ್ಥಿಗಳಲ್ಲಿ 60,692 ( ಶೇ 31.27) ಮಂದಿ ತೇರ್ಗಡೆಯಾಗಿದ್ದಾರೆ. 

ಪರೀಕ್ಷೆ–1ರಲ್ಲಿ 4.76 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಎರಡೂ ಪರೀಕ್ಷೆಗಳಿಂದ ಉತ್ತೀರ್ಣರಾದವರ ಸಂಖ್ಯೆ 5.36 ಲಕ್ಷಕ್ಕೆ ಏರಿಕೆಯಾಗಿದೆ. ಒಟ್ಟಾರೆ ಫಲಿತಾಂಶ ಶೇ 77.96 ಇದೆ. 

ಫಲಿತಾಂಶ ಸುಧಾರಣೆ ಬಯಸಿ ಮತ್ತೊಮ್ಮೆ ಪರೀಕ್ಷೆ ಬರೆದಿದ್ದ 71,964 ವಿದ್ಯಾರ್ಥಿಗಳಲ್ಲಿ 41,719 ವಿದ್ಯಾರ್ಥಿಗಳು ಮೊದಲ ಪರೀಕ್ಷೆಗಿಂತ ಅಧಿಕ ಅಂಕ ಪಡೆದಿದ್ದಾರೆ. ರಸಾಯನ ವಿಜ್ಞಾನ, ಭೌತ ವಿಜ್ಞಾನ ಹಾಗೂ ಗಣಿತ ವಿಷಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಫಲಿತಾಂಶ ವೃದ್ಧಿಸಿಕೊಂಡಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳು ಸಿಇಟಿ ರ್‍ಯಾಕಿಂಗ್‌ ಉತ್ತಮಪಡಿಸಿಕೊಳ್ಳಲು ಈ ಫಲಿತಾಂಶ ಅವಕಾಶವಾಗಿದೆ. 

ADVERTISEMENT

ಮೊದಲ ಮತ್ತು ಎರಡನೇ ಪರೀಕ್ಷೆಯಲ್ಲಿ ತೇರ್ಗಡೆಯಾಗದ ವಿದ್ಯಾರ್ಥಿಗಳಿಗೆ ಜೂನ್‌ 9ರಿಂದ 20ರವರೆಗೆ ಪರೀಕ್ಷೆ–3 ನಡೆಸಲಾಗುತ್ತದೆ. ಮೂರನೇ ಪರೀಕ್ಷೆಗೂ ಪರೀಕ್ಷಾ ಶುಲ್ಕ ಇರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.