ADVERTISEMENT

ಸೂಪರ್‌ ಫಾಸ್ಟ್‌ ರೈಲಿಗೆ ₹ 465 ದರ ನಿಗದಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 19:45 IST
Last Updated 27 ಜೂನ್ 2019, 19:45 IST
   

ಹುಬ್ಬಳ್ಳಿ: ಬೆಂಗಳೂರು– ಬೆಳಗಾವಿ ನಡುವೆ ಇದೇ 29ರಿಂದ ಸಂಚಾರ ಆರಂಭಿಸಲಿರುವ ತತ್ಕಾಲ್‌ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ವಿಶೇಷ ರೈಲಿನ ಸ್ಲೀಪರ್‌ ಕ್ಲಾಸ್‌ ಪ್ರಯಾಣ ದರ ₹ 465 ನಿಗದಿ ಮಾಡಲಾಗಿದೆ.

ಗುರುವಾರ ಟಿಕೆಟ್‌ ಬುಕ್ಕಿಂಗ್ ಆರಂಭವಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೂರು ಸೀಟುಗಳು ಮಾತ್ರ ಉಳಿದಿವೆ.

‘ಹೊಸ ರೈಲು ಸೂಪರ್‌ ಫಾಸ್ಟ್‌ ಹಾಗೂ ತತ್ಕಾಲ್ ಆಗಿರುವುದರಿಂದ ರಾಣಿ ಚನ್ನಮ್ಮಗಿಂತಲೂ ಬೆಲೆ ಹೆಚ್ಚಿದೆ. ರೈಲು ಕಾಯಂ ಸಂಚಾರ ಆರಂಭಿಸಿದ ನಂತರ ದರ ಪರಿಷ್ಕರಣೆಯಾಗಲಿದೆ’ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ರಾಣಿ ಚನ್ನಮ್ಮ ರೈಲಿನ ಪ್ರಯಾಣ ದರ ಬೆಂಗಳೂರಿನಿಂದ ಬೆಳಗಾವಿಗೆ ₹ 340 ಇದ್ದರೆ, ಬೆಳಗಾವಿಯಿಂದ ಯಶವಂತ
ಪುರಕ್ಕೆ ಹೋಗುವ ಸಂಪರ್ಕಕ್ರಾಂತಿ ಎಕ್ಸ್‌ಪ್ರೆಸ್‌ ರೈಲಿನ ಸ್ಲೀಪರ್‌ ಕ್ಲಾಸ್‌ ಪ್ರಯಾಣ ದರ ₹ 365 ಇದೆ.

ಸಂಪರ್ಕ ಕ್ರಾಂತಿ ರೈಲು ಬೆಂಗಳೂರಿನಿಂದ ಬೆಳಗಾವಿ ತಲುಪಲು 11 ತಾಸು 15 ನಿಮಿಷ ಮತ್ತು ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ 11 ತಾಸು 25 ನಿಮಿಷ ತೆಗೆದುಕೊಳ್ಳುತ್ತದೆ. ತತ್ಕಾಲ್‌ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ 10 ತಾಸಿನಲ್ಲಿ ಕುಂದಾನಗರಿ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.