ADVERTISEMENT

ರಾಜ್ಯದ ವಿವಿಧೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 22:20 IST
Last Updated 16 ಜೂನ್ 2020, 22:20 IST
ಕಲಬುರ್ಗಿಯಲ್ಲಿ ಮಂಗಳವಾರ ಬಿರುಸಿನ ಮಳೆ ಸುರಿಯಿತು. ಮಳೆಯಲ್ಲಿಯೇ ದ್ವಿಚಕ್ರ ವಾಹನ ಸವಾರರೊಬ್ಬರು ಸಾಗಿದರು – ಚಿತ್ರ; ಪ್ರಶಾಂತ್ ಎಚ್‌.ಜಿ.
ಕಲಬುರ್ಗಿಯಲ್ಲಿ ಮಂಗಳವಾರ ಬಿರುಸಿನ ಮಳೆ ಸುರಿಯಿತು. ಮಳೆಯಲ್ಲಿಯೇ ದ್ವಿಚಕ್ರ ವಾಹನ ಸವಾರರೊಬ್ಬರು ಸಾಗಿದರು – ಚಿತ್ರ; ಪ್ರಶಾಂತ್ ಎಚ್‌.ಜಿ.   

ಬೆಂಗಳೂರು: ಮುಂಗಾರು ಅಬ್ಬರ ಮುಂದುವರಿದಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಂಗಳವಾರ ಭಾರಿ ಮಳೆ ಯಾಗಿದೆ.ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಸಮುದ್ರದ ಅಬ್ಬರ ಹೆಚ್ಚಿದೆ.

ಕಲಬುರ್ಗಿ, ಬೀದರ್‌ ಜಿಲ್ಲೆ ಯಾದ್ಯಂತ ಭಾರಿ ಮಳೆಯಾಗಿದೆ. ರಾಯಚೂರು ನಗರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಸುರಿಯಿತು. ಕಲಬುರ್ಗಿ ನಗರದಲ್ಲಿ 76.50 ಮಿಲಿ ಮೀಟರ್‌ ಮಳೆಯಾಗಿದೆ.

ಹಾನಿಗೀಡಾಗಿದ್ದ ಮನೆ ಸಮುದ್ರ ಪಾಲು: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಸಮುದ್ರದ ಅಬ್ಬರ ಹೆಚ್ಚಿದೆ.

ADVERTISEMENT

ಉಳ್ಳಾಲದ ಸೋಮೇಶ್ವರ ತೀರದಲ್ಲಿ ಕಳೆದ ವರ್ಷ ಅಲೆಗೆ ಹಾನಿ ಗೀಡಾಗಿದ್ದ ಮನೆಯೊಂದು ಸಮುದ್ರ ಪಾಲಾ ಗಿದೆ.ಪುತ್ತೂರು, ವಿಟ್ಲದ ಕನ್ಯಾನದಲ್ಲಿ ಕೃತಕ ನೆರೆ ಉಂಟಾಗಿತ್ತು. ಬಂಟ್ವಾಳ ತಾಲ್ಲೂಕಿನ ಕೊಡ್ಮಾಣ್ ಗ್ರಾಮದ ಮಾಲತಿ ಶಿವರಾಂ ಅವರ ಮನೆಯ ಪಕ್ಕದ ತಡೆಗೋಡೆ ಕುಸಿದು ಬಿದ್ದಿದೆ. ಮೂಡುನಡುಗೋಡು ಗ್ರಾಮದ ಹೆಲೆನ್ ಅರ್ಬನ್ ಲೋಬೊ ಅವರ ಮನೆ ಚಾವಣಿ ಮೇಲೆ ಮರ ಬಿದ್ದು ಹಾನಿಯಾಗಿದೆ. ಉಡುಪಿ ಜಿಲ್ಲೆಯ ಪಡುಬಿದ್ರಿ ಪಾದೆಬೆಟ್ಟು ಗ್ರಾಮದ ಹೊಯಿಗೆ ತೋಟ ಪ್ರದೇಶದಲ್ಲಿ 6 ಮನೆಗಳು ಜಲಾವೃತಗೊಂಡು ನಿವಾಸಿಗಳು ಸಮಸ್ಯೆ ಅನುಭವಿಸಿದರು.

ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಭಾಗಮಂಡಲ, ಚೇರಂ ಬಾಣೆ, ಅಪ್ಪಂಗಳ, ಕಾಟಕೇರಿ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ.ಹಾಸನ ಸೇರಿದಂತೆ ಜಿಲ್ಲೆಯ ಆಲೂರು, ಶ್ರವಣಬೆಳಗೊಳ ಹಾಗೂ ಹೆತ್ತೂರು ಭಾಗದಲ್ಲಿ ತುಂತುರು ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ ಯಾಗಿದೆ.ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಸೋನೆ ಮಳೆಯಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ ಸಾಧಾರಣ ಮಳೆ ಯಾಗಿದೆ.ಬೆಳಗಾವಿ, ಖಾನಾಪುರ ಹಾಗೂ ಚಿಕ್ಕೋಡಿಯಲ್ಲಿ ಜೋರಾಗಿ ಮಳೆಯಾಗಿದೆ. ಮಲಪ್ರಭಾ, ಘಟ ಪ್ರಭಾ, ಕೃಷ್ಣಾ ನದಿಗಳ ಒಳಹರಿವು ಹೆಚ್ಚಳವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ, ಅಂಕೋಲಾ, ಜೊಯಿಡಾ, ಕಾರವಾರದಲ್ಲಿ ಇಡೀ ದಿನ ಮಳೆ ಸುರಿದರೆ, ಭಟ್ಕಳದಲ್ಲಿ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಬಂತು.ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ರಭಸದ ಗಾಳಿಗೆ ಮರವೊಂದು ರಸ್ತೆಗೆ ಉರುಳಿಬಿದ್ದಿದೆ. ತಾಳಿಕೋಟೆ, ಬಸವನ ಬಾಗೇವಾಡಿ, ಕೊಲ್ಹಾರ, ನಿಡಗುಂದಿ, ಮುದ್ದೇಬಿಹಾಳದಲ್ಲಿ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.