ಪ್ರಾತಿನಿಧಿಕ ಚಿತ್ರ
ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಎಂ.ಕೆ.ರಮೇಶ್ ಅವರ ಅವಧಿಯನ್ನು ಆರು ತಿಂಗಳು ವಿಸ್ತರಿಸಿ, ರಾಜ್ಯಪಾಲ ಥಾವರಚಂದ್ ಗೆಹಲೋತ್ ಆದೇಶ ಹೊರಡಿಸಿದ್ದಾರೆ.
ರಮೇಶ್ ಅವರು 2022 ರ ಫೆಬ್ರವರಿ 11 ರಂದು ಮೂರು ವರ್ಷಗಳ ಅವಧಿಗೆ ಕುಲಪತಿಯಾಗಿ ನೇಮಕವಾಗಿದ್ದರು. ರಮೇಶ್ ಅವರ ಅವಧಿ ಇದೇ ಫೆ. 10ಕ್ಕೆ ಕೊನೆಗೊಳ್ಳಬೇಕಿತ್ತು. ಹೊಸ ಕುಲಪತಿ ನೇಮಕಕ್ಕೆ ಸರ್ಕಾರ ಈಗಾಗಲೇ ಶೋಧನಾ ಸಮಿತಿ ರಚಿಸಿದ್ದು, ಮೂವರು ಅರ್ಹ ಅಭ್ಯರ್ಥಿಗಳ ಪಟ್ಟಿ ಸಿದ್ಧತೆಯ ಕಾರ್ಯ ನಡೆಯುತ್ತಿದೆ.
ಆರು ತಿಂಗಳು ಅವಧಿಯನ್ನು ವಿಸ್ತರಿಸಿದ್ದರೂ, ಅಷ್ಟರ ಒಳಗೆ ಹೊಸ ಕುಲಪತಿ ನೇಮಕವಾದರೆ ರಮೇಶ್ ಅವರ ಅವಧಿ ಸಹಜವಾಗಿ ಕೊನೆಯಾಗಲಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.