ADVERTISEMENT

ಶ್ರೀರಾಮ ರಥಯಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 17:31 IST
Last Updated 16 ಏಪ್ರಿಲ್ 2022, 17:31 IST
ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್‌ ಸಿಂಹ ಹಾಗೂ ಬಿಜೆಪಿ ಮುಖಂಡ ಡಾ.ಅರುಣ್‌ ಸೋಮಣ್ಣ ಅವರು ಶ್ರೀರಾಮನ ವಿಗ್ರಹಕ್ಕೆ ಪುಷ್ಪನಮನ ಸಲ್ಲಿಸಿ ರಥಯಾತ್ರೆಗೆ ಚಾಲನೆ ನೀಡಿದರು–ಪ್ರಜಾವಾಣಿ ಚಿತ್ರ  
ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್‌ ಸಿಂಹ ಹಾಗೂ ಬಿಜೆಪಿ ಮುಖಂಡ ಡಾ.ಅರುಣ್‌ ಸೋಮಣ್ಣ ಅವರು ಶ್ರೀರಾಮನ ವಿಗ್ರಹಕ್ಕೆ ಪುಷ್ಪನಮನ ಸಲ್ಲಿಸಿ ರಥಯಾತ್ರೆಗೆ ಚಾಲನೆ ನೀಡಿದರು–ಪ್ರಜಾವಾಣಿ ಚಿತ್ರ     

ಬೆಂಗಳೂರು: ‘ಶ್ರೀರಾಮನ ಆದರ್ಶ, ತತ್ವ ಸಿದ್ಧಾಂತದಂತೆ ಬಿಜೆಪಿಯು ಜನಪರ ಹಾಗೂ ಪಾರದರ್ಶಕ ಆಡಳಿತ ನೀಡುತ್ತಿದೆ’ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಬೆಂಗಳೂರು ಕರಗ ಶಕ್ತ್ಯೋತ್ಸವದ ಪ್ರಯುಕ್ತ ವಿ.ಸೋಮಣ್ಣ ಯುವಪಡೆ ಹಾಗೂ ಗೋವಿಂದರಾಜನಗರ ಮಂಡಳ ಬಿಜೆಪಿ ಹಮ್ಮಿಕೊಂಡಿದ್ದ ಶ್ರೀರಾಮನವಮಿ ಉತ್ಸವ ಹಾಗೂ ಶ್ರೀರಾಮ ರಥಯಾತ್ರೆಗೆ ಚಾಲನೆ ನೀಡಿ ಶನಿವಾರ ಮಾತನಾಡಿದರು.

ರಥಯಾತ್ರೆಯುಟೋಲ್‌ಗೇಟ್‌ ಬಳಿಯ ಸರ್ಕಲ್‌ ಶನಿಮಹಾತ್ಮ ದೇವಸ್ಥಾನದಿಂದ ಆರಂಭವಾಗಿ ಮಾರುತಿ ಮಂದಿರದ ಬಳಿ ಕೊನೆಗೊಂಡಿತು. ಶ್ರೀರಾಮ, ಸೀತಾದೇವಿ ಹಾಗೂ ಲಕ್ಷ್ಮಣರ ವಿಗ್ರಹಗಳನ್ನು ಹೊತ್ತಿದ್ದ ರಥವನ್ನು ಭಕ್ತರು ಆದರದಿಂದ ಬರಮಾಡಿಕೊಂಡರು. ಕಂಸಾಳೆ, ವೀರಗಾಸೆ, ಡೋಲು, ಕೀಲುಕುದುರೆ ಹಾಗೂ ವಿವಿಧ ದೇವರ ವೇಷಭೂಷಣ ತೊಟ್ಟವರು ಎಲ್ಲರನ್ನು ರಂಜಿಸಿದರು.

ADVERTISEMENT

ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ, ವಿಜಯನಗರ ಮಂಡಲ ಬಿಜೆಪಿ ಅಧ್ಯಕ್ಷ ಟಿ.ವಿ.ಕೃಷ್ಣ, ಮುಖಂಡರಾದ ಕೆ.ಉಮೇಶ್‌ ಶೆಟ್ಟಿ, ಮೋಹನ್‌ಕುಮಾರ್‌, ದಾಸೇಗೌಡ, ಆನಂದ್‌, ರಾಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.