ADVERTISEMENT

‘ಅರ್ಜಿ ಸಲ್ಲಿಸದೆಯೇ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ’

ಸಚಿವ ಎಸ್.ಸುರೇಶ್ ಕುಮಾರ್ ಅಭಿಮತ * ರಮಣಶ್ರೀ ಶರಣ ಪ್ರಶಸ್ತಿಗಳು ಪ್ರದಾನ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 14:52 IST
Last Updated 17 ನವೆಂಬರ್ 2019, 14:52 IST
ಸಮಾರಂಭದಲ್ಲಿ (ಕುಳಿತಿರುವವರು ಎಡದಿಂದ) ಪ್ರತಿಕ್ಷಾ ಕಾಶಿ, ಪಾವನಿ ಕಾಶಿನಾಥ್, ಪುಷ್ಪ ಬಸವರಾಜ ಬಣಕಾರ, ಡಾ.ಕೆ ರವೀಂದ್ರನಾಥ್  ಅವರಿಗೆ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’, ಇಬ್ರಾಹಿಂ ಸುತಾರ ಅವರಿಗೆ ‘ರಮಣಶ್ರೀ ಶರಣ ಜೀವಮಾನ ಸಾಧಕ ಸನ್ಮಾನ’ ಹಾಗೂ ಡಾ.ಜಯಶ್ರೀ ದಂಡೆ, ಪ್ರೊ.ಸಿದ್ಧಣ್ಣ ಲಂಗೋಟಿ ಮತ್ತು ದೇವೇಂದ್ರ ಕುಮಾರ್ ಪತ್ತಾರ್ ಅವರಿಗೆ ‘ರಮಣಶ್ರೀ ಶರಣ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. (ನಿಂತಿರುವವರು) ಅಪ್ಪಾರಾವ್ ಅಕ್ಕೋಣಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್, ರಮಣಶ್ರೀ ಪ್ರತಿಷ್ಠಾನದ ಅರುಣಾ ಸತೀಶ್, ಅಧ್ಯಕ್ಷ ಎಸ್. ಷಡಕ್ಷರಿ, ವಿ.ಸೋಮಣ್ಣ, ಎಸ್.ಸುರೇಶ್ ಕುಮಾರ್, ಪತ್ರಕರ್ತ ವಿಶ್ವೇಶ್ವರ ಭಟ್, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಹಾಗೂ ಪ್ರತಿಷ್ಠಾನದ ವೀರೇಂದ್ರ ಷಡಕ್ಷರಿ ಇದ್ದರು – ಪ್ರಜಾವಾಣಿ ಚಿತ್ರ

ಬೆಂಗಳೂರು: ‘ರಾಜ್ಯೋತ್ಸವ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಸ್ವೀಕರಿಸುವ ಪ್ರಕ್ರಿಯೆಯನ್ನು ಕೈಬಿಟ್ಟು, ತಜ್ಞರ ಸಮಿತಿ ಅಂತಿಮಗೊಳಿಸಿದ ಸಾಧಕರಿಗೇ ಪ್ರಶಸ್ತಿಗಳನ್ನು ನೀಡುವಂತಾಗವೇಕು’ ಎಂದು ಪ್ರಾಥಮಿಕ ಹಾಗೂ‍ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಭಿಮತ ವ್ಯಕ್ತಪಡಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು.

‘ಅರ್ಜಿ ಸಲ್ಲಿಸಿದವರಿಗೆ ಪ್ರಶಸ್ತಿಗಳನ್ನು ನೀಡುವುದರಿಂದ ಪ್ರಶಸ್ತಿ ವಿತರಣೆ ಪ್ರಕ್ರಿಯೆ ಪಾರದರ್ಶಕತೆ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಅದೇ ರೀತಿ, ಪ್ರಶಸ್ತಿಗಳಿಗಾಗಿ ವಿವಿಧೆಡೆಯಿಂದ ಒತ್ತಡ, ಲಾಬಿ ನಡೆಸಲು ಅವಕಾಶ ಮಾಡಿಕೊಟ್ಟಂತಾಗಲಿದೆ’ ಎಂದು ತಿಳಿಸಿದರು.

ADVERTISEMENT

ವಸತಿ ಸಚಿವ ವಿ.ಸೋಮಣ್ಣ, ‘ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳು ಹಾಗೂ ವಿಷಯ ತಜ್ಞರು ಪ್ರಾಕೃತಿಕ ವಿಕೋಪಕ್ಕೆ ಕಾರಣಗಳು ಹಾಗೂ ವಾಯು ಮಾಲಿನ್ಯದಿಂದ ಎದುರಾಗುವ ಸವಾಲುಗಳ ಬಗ್ಗೆ ಪುಸ್ತಕಗಳನ್ನು ರಚಿಸಿ, ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು’ ಎಂದು ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ, ‘ವಚನ ಸಾಹಿತ್ಯವನ್ನು ಎಲ್ಲೆಡೆ ವಿಸ್ತರಿಸುವ ಕೆಲಸವನ್ನುಪರಿಷತ್ತು ಮಾಡುತ್ತಿದೆ. 2020–21ನೇ ಸಾಲಿನಿಂದ ಸರ್ಕಾರ ₹ 2 ಕೋಟಿ ಅನುದಾನ ನೀಡಿದರೆ ಬಸವಾದಿ ಶರಣರ ತತ್ವವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ವಿಸ್ತರಿಸಲು ಸಾಧ್ಯವಾಗುತ್ತದೆ’ ಎಂದರು.

ಎಸ್‌. ಷಡಕ್ಷರಿ ಅವರ ‘ಕ್ಷಣ ಹೊತ್ತು ಅಣಿ ಮುತ್ತು ಭಾಗ–7’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.