ADVERTISEMENT

ಹಿನ್ನೆಲೆಗೆ ತಕ್ಕಂತೆ ಮಾತಾಡ್ತಾರೆ: ಬಿಜೆಪಿ ನಾಯಕರ ಮಾತಿಗೆ ಸ್ಪೀಕರ್ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 5:05 IST
Last Updated 19 ಜುಲೈ 2019, 5:05 IST
   

ಬೆಂಗಳೂರು:ತಮ್ಮ ನಿವಾಸದಿಂದ ವಿಧಾನಸೌಧಕ್ಕೆ ತೆರಳುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್‌ಕುಮಾರ್, ‘11ಕ್ಕೆ ಅಧಿವೇಶನ ಇದೆ. ನಾನು ಇಲ್ಲಿ ಏನೂ ಹೇಳಬಾರದು. ಎಲ್ಲದಕ್ಕೂ ಅಲ್ಲಿಯೇ ಉತ್ತರ ಸಿಗುತ್ತೆ’ ಎಂದರು.

ಸ್ಪೀಕರ್ ನಿಲುವನ್ನು ಬಿಜೆಪಿ ನಾಯಕ ಈಶ್ವರಪ್ಪ ಟೀಕಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ವ್ಯಕ್ತಿಗಳ ಅವರ ಹಿನ್ನೆಲೆ ಮತ್ತುನಡತೆಗೆ ಅನುಗುಣವಾಗಿ ಮಾತಾಡ್ತಾರೆ. ಅವರಿಗೆ ಧನ್ಯವಾದಗಳು. ನನಗೆ ಮನಸ್ಸು ನೋವಾಗಿರಬಹುದು. ಯಾರಾರು ಹೆಗೆ ಬೇಳೆದು ಬಂದಿದ್ದರಾರೆ. ಹಾಗೆ ಮಾತಾಡ್ತಾರೆ. ಯಾರೂ ಏನೂ ಮಾಡೋಕೆ ಅಗಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಶೋಭಾ ಕರಂದ್ಲಾಜೆ ಟೀಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಆಕೆ ಓರ್ವ ಹಿರಿಯ ರಾಜಕಾರಿಣಿ, ಸಂಸದೆ, ಹೆಣ್ಣುಮಗಳು. ಎಲ್ಲರಿಗೂ ಸಾರ್ವಜನಿಕ ಜೀವನದಲ್ಲಿ ಇರಲು ಅವಕಾಶವಿದೆ. ಹೊರಗೆ ಜನ ಇದ್ದಾರೆ ಅನ್ನುವ ಭಯ ನಮಗೆ ಇರಬೇಕು. ಇಲ್ಲದಿದ್ದರೆ ಹತೋಟಿ ಇರಲ್ಲ. ಅವರ ಮಾತುಗಳಿಗೆಲ್ಲಾ ಧನ್ಯವಾದ ಅರ್ಪಿಸುತ್ತೇನೆ ಅಷ್ಟೇ’ ಎಂದು ಕಾರ್ ಹತ್ತಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.