ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನದ ಕಳ್ಳ ಸಾಗಣೆ ಪ್ರಕರಣದಲ್ಲಿ ಇಬ್ಬರು ಪ್ರಭಾವಿ ಸಚಿವರು ಇದ್ದಾರೆ ಎಂದು ಬಿಜೆಪಿ ಪದೇ ಪದೇ ಆರೋಪ ಮಾಡುವ ಬದಲು ಕೇಂದ್ರದ ಜತೆ ಮಾತನಾಡಿ ಇ.ಡಿ, ಸಿಬಿಐನಿಂದ ತನಿಖೆ ಮಾಡಿಸಲಿ ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ತನಿಖಾ ಏಜೆನ್ಸಿಗಳು ಕೇಂದ್ರದ ಅಧೀನದಲ್ಲಿವೆ, ಬಿಜೆಪಿಯವರನ್ನು ತಡೆದವರು ಯಾರು’ ಎಂದು ಪ್ರಶ್ನಿಸಿದರು.
'ಬಿಜೆಪಿ ಸರ್ಕಾರದ ಅವಧಿಯಲ್ಲಿ ರನ್ಯಾ ರಾವ್ ಕೆಐಎಡಿಬಿಯಿಂದ 12 ಎಕರೆ ಜಮೀನು ಪಡೆಯುವುದಕ್ಕೂ ಆರು ತಿಂಗಳು ಮೊದಲು ತಮ್ಮ ಬ್ಯಾಂಕ್ ಖಾತೆಗೆ ₹10 ಲಕ್ಷ ಸಂದಾಯ ಮಾಡಿಸಿಕೊಂಡಿದ್ದರು. ಈ ರೀತಿ ಹಣ ವರ್ಗಾವಣೆ ಮಾಡಿರುವುದು ಪ್ರಭಾವಿ ರಾಜಕಾರಣಿ ಎನ್ನಲಾಗಿದೆ. ರನ್ಯಾ ಮತ್ತು ಅವರ ಸಹೋದರ ಋಷಬ್ ನಿರ್ದೇಶಕರಾಗಿದ್ದ ಕ್ಸಿರೋದಾ ಇಂಡಿಯಾ ಲಿಮಿಟೆಡ್‌ಗೆ ಈ ಜಮೀನು ನೀಡಲಾಗಿತ್ತು. ಆ ಪ್ರಭಾವಿ ರಾಜಕಾರಣಿ ಯಾರು? ಅವೆಲ್ಲಾ ತನಿಖೆಯಿಂದ ಹೊರಬರಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.