ADVERTISEMENT

ಕಣ್ಣಿನಲ್ಲಿ ಜೀವಂತ ಹುಳ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 11:56 IST
Last Updated 4 ಅಕ್ಟೋಬರ್ 2018, 11:56 IST
   

ಭಟ್ಕಳ: ಇಲ್ಲಿನ ವ್ಯಕ್ತಿಯೊಬ್ಬರ ಕಣ್ಣಿನಲ್ಲಿ ಸೇರಿಕೊಂಡಿದ್ದ ಸುಮಾರು 15 ಸೆಂ.ಮೀ ಜೀವಂತ ಹುಳವನ್ನು ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿಹೊರತೆಗೆದಿದ್ದಾರೆ.

ಕಣ್ಣಿನಲ್ಲಿ ಹುಳವಿದ್ದ ವ್ಯಕ್ತಿಯು ತುಂಬ ಸಮಯದಿಂದ ಕಣ್ಣು ನೋವಿನಿಂದ ಬಳಲುತ್ತಿದ್ದರು. ಈ ಸಂಬಂಧ ಕುಂದಾಪುರದ ನೇತ್ರತಜ್ಞ ಡಾ.ಶ್ರೀಕಾಂತ ಶೆಟ್ಟಿ ಅವರಲ್ಲಿ ಪರೀಕ್ಷಿಸಿದರು. ತಪಾಸಣೆ ನಡೆಸಿದ ಅವರು, ಬಲಗಣ್ಣಿನ ಒಳಗೆ ಜೀವಂತ ಹುಳ ಓಡಾಡುತ್ತಿರುವುದನ್ನು ಪತ್ತೆ ಹಚ್ಚಿದರು.

ಔಷಧಿ ಬಳಸಿ ಹುಳ ಸಾಯಿಸುವುದಕ್ಕೆ ಮುಂದಾದರೆ, ದೃಷ್ಟಿಗೇ ಅಪಾಯವಾಗಬಹುದು ಎಂದು ವೈದ್ಯರು ಅರಿತರು. ಬಳಿಕ ಕಣ್ಣಿನಲ್ಲಿದ್ದ ಹುಳಗಳು ಒಂದುಕಡೆ ಬರುವಂತೆ ಮಾಡಿದರು. ನಂತರ ಶಸ್ತ್ರಚಿಕಿತ್ಸೆ ನಡೆಸಿ ಹುಳವನ್ನು ಜೀವಂತವಾಗಿ ಹೊರತೆಗೆದಿದ್ದಾರೆ. ಇಷ್ಟು ದೊಡ್ಡ ಮಟ್ಟದ ಹುಳ ಕಣ್ಣಿನಲ್ಲಿ ಬೆಳೆದಿರುವುದು ದೇಶದಲ್ಲೇ ಅತಿ ವಿರಳ ಎಂದು ಅವರು ಹೇಳುತ್ತಾರೆ. ಶಸ್ತ್ರಚಿಕಿತ್ಸೆಗೊಳಗಾದ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದಾರೆ.

ADVERTISEMENT

ಸೊಳ್ಳೆಗಳೇ ಕಾರಣ:ಆನೆಕಾಲುರೋಗಕ್ಕೆ ಕಾರಣವಾಗುವರೋಗಾಣುಗಳ ಹರಡುವಿಕೆಯಿಂದ ಇಂತಹ ಸಮಸ್ಯೆಗಳು ಎದುರಾಗುತ್ತದೆ. ಇವುಗಳನ್ನು ಸೊಳ್ಳೆಗಳುಹರಡುತ್ತವೆ. ಸೊಳ್ಳೆಗಳು ಕಚ್ಚಿದಾಗ ಅದರ ಮೊಟ್ಟೆಗಳುರಕ್ತದ ಸಂಪರ್ಕಕ್ಕೆ ಬರುತ್ತವೆ. ಅವುಒಡೆದು ಹುಳಗಳು ಅಲ್ಲೇ ಬೆಳೆಯಲಾರಂಭಿಸುತ್ತವೆ.

ಇವು ಕಣ್ಣು ಮಾತ್ರವಲ್ಲ ಗಾಯಗಳ ಮೂಲಕವೂ ದೇಹದ ವಿವಿದ ಭಾಗಗಳಿಗೆ ಸೇರುತ್ತವೆ. ‘ವುಚೆರೇರಿ ಬ್ಯಾಂಕ್ಯಾಪ್ಟಿ’ ನ್ನುವಪ್ರಭೇದದಈ ಹುಳಗಳು ಮೆದುಳಿನಲ್ಲಿ ಸೇರಿದರೆ ಫಿಟ್ಸ್, ಕೈ ಕಾಲುಗಳಲ್ಲಿ ಇದ್ದರೆ ತುರಿಕೆ, ಕಣ್ಣಿನಲ್ಲಿ ಸೇರಿದರೆ ದೃಷ್ಟಿಮಂಜಾಗುತ್ತದೆ. ಆದರೆ, ಜೀವಕ್ಕೆ ಅಪಾಯವಿರುವುದಿಲ್ಲ. ಇಂತಹ ರೋಗಗಳು ಕಂಡುಬರುವುದು ಅತಿ ವಿರಳ. ಹಾಗಾಗಿ ಯಾರೂಭಯಪಡಬೇಕಿಲ್ಲಎಂದು ಡಾ. ಶ್ರೀಕಾಂತ ಶೆಟ್ಟಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.