ADVERTISEMENT

ಕೋವಿಡ್: ರಾಜ್ಯಕ್ಕೆ ರೆಮ್‌ಡಿಸಿವಿರ್‌ 1.22 ಲಕ್ಷ ವೈಯಲ್ಸ್, ಆಕ್ಸಿಜನ್‌ 800 ಟನ್‌

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 20:56 IST
Last Updated 24 ಏಪ್ರಿಲ್ 2021, 20:56 IST
   

ಬೆಂಗಳೂರು: ಕೇಂದ್ರ ಸರ್ಕಾರ ವಿವಿಧ ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ಏ.21ರಿಂದ 30ರವರೆಗಿನ ರೆಮ್‌ಡಿಸಿವಿರ್‌ ಚುಚ್ಚುಮದ್ದು ಪೂರೈಕೆಯನ್ನು ಮರುಹಂಚಿಕೆ ಮಾಡಿದ್ದು, ಕರ್ನಾಟಕದ ಪಾಲು 55 ಸಾವಿರವೈಯಲ್ಸ್‌ನಿಂದ 1.22 ಲಕ್ಷ ವೈಯಲ್ಸ್‌ಗೆ ಏರಿಕೆಯಾಗಿದೆ.

ಅಲ್ಲದೆ, ಪ್ರತಿನಿತ್ಯದ ಹಂಚಿಕೆ ಮಾಡುವ ಆಕ್ಸಿಜನ್‌ ಪ್ರಮಾಣವನ್ನು 300 ಟನ್‌ನಿಂದ 800 ಟನ್‌ಗೆ ಹೆಚ್ಚಿಸಿದೆ.

ರೆಮ್‌ಡಿಸಿವಿರ್‌ ಮರುಹಂಚಿಕೆ ಬಗ್ಗೆ ಟ್ವೀಟ್‌ ಮಾಡಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ, ‘ನಾನು ನಿರ್ವಹಿಸುವ ಔಷಧ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಉನ್ನತಾಧಿಕಾರದ ಸಮಿತಿ ಈ ನಿರ್ಣಯ ಕೈಗೊಂಡಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ರಾಜ್ಯಕ್ಕೆ ನಾವು ಸಂಪೂರ್ಣ ಸಹಕಾರ, ನೆರವು ನೀಡುತ್ತೇವೆ’ ಎಂದಿದ್ದಾರೆ.

ADVERTISEMENT

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ಕೇಂದ್ರದ ಈ ನಡೆ ಕೋವಿಡ್‌ ವಿರುದ್ಧದ ಹೋರಾಟಕ್ಕೆ ಬಲ ತುಂಬಲಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.