ADVERTISEMENT

‘ಒಳ ಮೀಸಲಾತಿಗಾಗಿ ಜನಾಂದೋಲನ’

ಎ.ಜಿ.ಸದಾಶಿವ ಆಯೋಗ ವರದಿ: ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 21:40 IST
Last Updated 7 ಫೆಬ್ರುವರಿ 2021, 21:40 IST

ಕಲಬುರ್ಗಿ: ‘ಅಸ್ಪೃಶ್ಯ ಜಾತಿಗಳಾದ ಮಾದಿಗ ಹಾಗೂ ಮಾದಿಗ ಸಂಬಂಧಿತ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಜಾಗೃತಿ ಪ್ರವಾಸ ಕೈಗೊಂಡು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಚಿತ್ರದುರ್ಗದ ಕೋಡಿಹಳ್ಳಿ ಆದಿಜಾಂಬವ ಮಠದ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

‘ಮಾದಿಗ ಮತ್ತು ಮಾದಿಗ ಸಂಬಂ ಧಿತ ಅಸ್ಪೃಶ್ಯ ಜಾತಿಗಳ ಮಠಾಧೀಶರ ನೇತೃತ್ವದಲ್ಲಿ ಹಮ್ಮಿಕೊಳ್ಳುವ ಪಾದಯಾತ್ರೆ, ಧರಣಿ ಸ್ಥಳವನ್ನು ಮಾರ್ಚ್‌ ಎರಡನೇ ವಾರದಲ್ಲಿ ಪ್ರಕಟಿಸಲಾಗುವುದು. ಇದರ ಬಗ್ಗೆ ಚರ್ಚಿಸಲು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಸ್ವಾಮೀಜಿಗಳ ಮತ್ತು ಸಮುದಾಯದ ಮುಖಂಡರ ಸಭೆ ನಡೆಸ ಲಾಗುವುದು’ ಎಂದು ಅವರು ಭಾನು ವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನ್ಯಾಯಮೂರ್ತಿ ಎ.ಜಿ.ಸದಾಶಿವ ಆಯೋಗದ ವರದಿ ಹಲವು ವರ್ಷಗಳಿಂದ ಸರ್ಕಾರದ ಮುಂದಿದ್ದರೂ ಸದನದಲ್ಲಿ ಮಂಡಿಸದಿರುವುದು ಸಮುದಾಯದ ಬಗ್ಗೆ ಸರ್ಕಾರಕ್ಕಿರುವ ಅಸಡ್ಡೆ ತೋರಿಸುತ್ತದೆ’ ಎಂದರು.

ADVERTISEMENT

ಮಹಾಶಿವಶರಣ ಹರಳಯ್ಯ ಗುರುಪೀಠದ ಪೀಠಾಧ್ಯಕ್ಷ ಬಸವ ಹರಳಯ್ಯಾ ಸ್ವಾಮೀಜಿ ಮಾತನಾಡಿ, ‘ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಹಲವಾರು ಜಾತಿಗಳಿವೆ. ಇದರಲ್ಲಿನ ಬಲಿಷ್ಠ ಜಾತಿಗಳು ನಮ್ಮ ಪಾಲಿನ ಸವಲತ್ತು ಕಸಿದುಕೊಳ್ಳುತ್ತಿವೆ’ ಎಂದರು.

ಕಲಘಟಗಿಯ ಡೋಹರ ಕಕ್ಕಯ್ಯ ಮಠದ ಗುರು ಮಾತಾನಂದ ತಾಯಿ, ಹಂಪಿಯ ಮಾತಾಂಗ ಆಶ್ರಮದ ಪೂರ್ಣಾ
ನಂದ ಸ್ವಾಮೀಜಿ, ಕುಕನೂರ ಇಟಗಿಯ ಶಿವಶರಣ ಗದಿಗೆಪ್ಪಜ್ಜ, ಹೋರಾಟದ ಸಮನ್ವಯ ಸಮಿತಿ ಸಂಚಾಲಕ ಮುತ್ತಣ್ಣ ಬೆಣ್ಣೂರ, ಮುಖಂಡರಾದ ಮಲ್ಲಿಕಾರ್ಜುನ, ನಂದಕುಮಾರ, ಪರಮೇಶ್ವರ ಖಾನಾಪೂರ, ಚಂದ್ರಿಕಾ ಪರಮೇಶ್ವರ, ದಶರಥ ಕಲಗುರ್ತಿ, ಸಂತೋಷ ಸವಣೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.