ADVERTISEMENT

ರಸ್ತೆ ಕಾಮಗಾರಿ ಮಂದಗತಿ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಮೇ 2019, 19:27 IST
Last Updated 7 ಮೇ 2019, 19:27 IST
ರಸ್ತೆ ವಿಸ್ತರಣೆ ಕಾಮಗಾರಿ ಅರ್ಧಕ್ಕೆ ನಿಂತಿರುವುದು
ರಸ್ತೆ ವಿಸ್ತರಣೆ ಕಾಮಗಾರಿ ಅರ್ಧಕ್ಕೆ ನಿಂತಿರುವುದು   

ರಾಮನಗರ: ಬೆಂಗಳೂರು–ಮೈಸೂರು ಹೆದ್ದಾರಿ ವಿಸ್ತರಣೆಯ ಕಾಮಗಾರಿಯು ಕೆಲವು ಕಡೆ ಮಂದಗತಿಯಿಂದ ನಡೆದಿದ್ದು, ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿದೆ.

ಐಜೂರು ಪೊಲೀಸ್ ಠಾಣೆಯ ಮುಂಭಾಗ ರಸ್ತೆ ವಿಸ್ತರಣೆಗಾಗಿ ಅಗೆಯಲಾಗಿದ್ದು, ಸಾಕಷ್ಟು ದಿನಗಳಿಂದ ಹಾಗೆಯೇ ಬಿಡಲಾಗಿದೆ. ಇದರಿಂದಾಗಿ ಸಂಪರ್ಕ ರಸ್ತೆಗಳಲ್ಲಿ ಸಂಚರಿಸುವ ಸವಾರರಿಗೆ ತೀವ್ರ ತೊಂದರೆ ಆಗಿದ್ದು, ಅಪಘಾತಗಳೂ ಸಂಭವಿಸುತ್ತಿವೆ. ರಸ್ತೆಯಲ್ಲಿ ಕನಿಷ್ಠ ಎಚ್ಚರಿಕೆಯ ಫಲಕವನ್ನು ಹಾಕುವ ಕೆಲಸ ಆಗಿಲ್ಲ.

ನಿತ್ಯ ಪೊಲೀಸ್ ಠಾಣೆಯ ಎದುರೇ ಅಪಘಾತ ಸಂಭವಿಸುತ್ತಿದ್ದರೂಪೊಲೀಸರಿಗೆ ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಸುಮಾರು ಅಡಿಗಳಷ್ಟು ಆಳಕ್ಕೆರಸ್ತೆಯನ್ನು ಅಗೆಯಲಾಗಿದ್ದು, ಸುತ್ತ ಮರಳಿನ ಮೂಟೆಗಳನ್ನು ಬಿಟ್ಟರೆ ಬೇರೇನೂ ವ್ಯವಸ್ಥೆ ಮಾಡಿಲ್ಲ. ಪಾದಚಾರಿ ಮಾರ್ಗವನ್ನೂ ಅಗೆಯಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.