ADVERTISEMENT

ರೂಪೇಶ್‌ ‘ಡರ್ಟ್‌ ಕಿಂಗ್‌ ಆಫ್‌ ಹಂಪಿ’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 15:21 IST
Last Updated 6 ಫೆಬ್ರುವರಿ 2021, 15:21 IST
‘ಡರ್ಟ್‌ ಕಿಂಗ್‌ ಆಫ್‌ ಹಂಪಿ’ ಪ್ರಶಸ್ತಿಯೊಂದಿಗೆ ಬೆಂಗಳೂರಿನ ಬಿ.ಸಿ. ರೂಪೇಶ್‌
‘ಡರ್ಟ್‌ ಕಿಂಗ್‌ ಆಫ್‌ ಹಂಪಿ’ ಪ್ರಶಸ್ತಿಯೊಂದಿಗೆ ಬೆಂಗಳೂರಿನ ಬಿ.ಸಿ. ರೂಪೇಶ್‌   

ಹೊಸಪೇಟೆ: ಇಲ್ಲಿನ ‘ಮೋಟಾರ್‌ ಸ್ಪೋರ್ಟ್ಸ್‌ ಅಕಾಡೆಮಿ ಆಫ್‌ ವಿಜಯನಗರ’ ಸಂಸ್ಥೆಯು ಶನಿವಾರ ನಗರ ಹೊರವಲಯದಲ್ಲಿ ಏರ್ಪಡಿಸಿದ್ದ ಹಂಪಿ ಮೋಟಾರ್‌ ಸ್ಪೋರ್ಟ್ಸ್‌ ಆಟೊ ಕ್ರಾಸ್‌ ರೇಸ್‌ನಲ್ಲಿ ಬೆಂಗಳೂರಿನ ಬಿ.ಸಿ. ರೂಪೇಶ್‌ ಅವರು ಪ್ರಥಮ ಸ್ಥಾನ ಗಳಿಸಿ ‘ಡರ್ಟ್‌ ಕಿಂಗ್‌ ಆಫ್‌ ಹಂಪಿ’ ಪ್ರಶಸ್ತಿ ಜಯಿಸಿದರು.

ಪ್ರಶಸ್ತಿಯೊಂದಿಗೆ ₹1 ಲಕ್ಷ ನಗದು ಬಹುಮಾನ ನೀಡಿ ಅವರಿಗೆ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಒಟ್ಟು 92 ಜನ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಚಿಕ್ಕಮಗಳೂರಿನ ಮೊಹಮ್ಮದ್‌ ಸಾಹಿಲ್‌ ಅವರ ಕಾರು ತಲೆಕೆಳಗಾಗಿ ಉರುಳಿ ಬಿದ್ದು, ಜಖಂಗೊಂಡಿತು. ಆದರೆ, ಅವರಿಗೆ ಯಾವುದೇ ರೀತಿಯ ಅಪಾಯ ಆಗಲಿಲ್ಲ. ಸುರಕ್ಷತಾ ಸಿಬ್ಬಂದಿ ತಕ್ಷಣವೇ ಧಾವಿಸಿ, ಟ್ರ್ಯಾಕ್‌ನಿಂದ ಕಾರು ತೆಗೆದು, ಸಾಹಿಲ್‌ ಅವರನ್ನು ಸುರಕ್ಷಿತವಾಗಿ ಕಾರಿನಿಂದ ಹೊರಗಿಳಿಸಿದರು.

ಅಕಾಡೆಮಿಯ ಅಧ್ಯಕ್ಷ ಎಚ್‌.ಎಂ. ಸಂತೋಷ, ಚಿರುವೋಲಿ, ರೋಹಿತ್‌ ಗೌಡ, ದರ್ಪನ್‌ಗೌಡ, ಕಾರ್ತಿಕೇಶ್‌ ಇದ್ದರು. ಭಾನುವಾರ (ಫೆ. 7) ತಾಲ್ಲೂಕಿನ ಧರ್ಮಸಾಗರ, ಜಂಬುನಾಥಹಳ್ಳಿಯಲ್ಲಿ ಕಾರ್‌ ರೇಸ್‌ ಸ್ಪರ್ಧೆ ಜರುಗಲಿದೆ. ಇದರೊಂದಿಗೆ ರೇಸ್‌ ಕೊನೆಗೊಳ್ಳಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.