ADVERTISEMENT

2 ಕಡೆ ಆರ್‌ಎಸ್‌ಎಸ್‌ ಪಥಸಂಚಲನ: ಯಾದಗಿರಿ ಡಿ.ಸಿ.ಗೆ ಮನವಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 23:25 IST
Last Updated 27 ಅಕ್ಟೋಬರ್ 2025, 23:25 IST
<div class="paragraphs"><p>ಆರ್‌ಎಸ್‌ಎಸ್‌ ಪಥಸಂಚಲನ&nbsp;</p></div>

ಆರ್‌ಎಸ್‌ಎಸ್‌ ಪಥಸಂಚಲನ 

   

ಯಾದಗಿರಿ: ಗುರುಮಠಕಲ್‌ ಹಾಗೂ ಕೆಂಭಾವಿ ಪಟ್ಟಣಗಳಲ್ಲಿ ಪಥಸಂಚಲನ ನಡೆಸಲು ಅನುಮತಿ ನೀಡುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕರ್ತರು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರಿಗೆ ಸೋಮವಾರ ಮನವಿಪತ್ರಗಳನ್ನು ಸಲ್ಲಿಸಿದ್ದಾರೆ.  

ಗುರುಮಠಕಲ್‌ನಲ್ಲಿ ಅಕ್ಟೋಬರ್ 25ರಂದು ನಡೆಸಬೇಕಿದ್ದ ಪಥಸಂಚಲನಕ್ಕೆ ಅನುಮತಿ ಸಿಗದಿದ್ದಕ್ಕೆ ಮುಂದೂಡಿಕೆ ಮಾಡಿ, ಇ–ಮೇಲ್‌ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು. ಈಗ ಮತ್ತೊಂದು ಮನವಿ ಸಲ್ಲಿಸಿದ ಕಾರ್ಯಕರ್ತರು, ಅನುಮತಿ ಪತ್ರಕ್ಕಾಗಿ ಸಂಜೆವರೆಗೆ ಕಾದು ಬರಿಗೈಯಲ್ಲಿ ವಾಪಸಾದರು.

ADVERTISEMENT

‘ಗುರುಮಠಕಲ್‌ನಲ್ಲಿ ಅಕ್ಟೋಬರ್ 31 ಹಾಗೂ ಕೆಂಭಾವಿಯಲ್ಲಿ ನವೆಂಬರ್ 4ರಂದು ಪಥಸಂಚಲನ ನಡೆಸಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದ್ದೇವೆ. ಅನುಮತಿ ಸಿಗುವ ವಿಶ್ವಾಸದಲ್ಲಿ ಸಂಜೆವಗೂ ಕಚೇರಿಯಲ್ಲಿ ಕಾದಿದ್ದೆವು. ಮಂಗಳವಾರ ಕೊಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ’ ಎಂದು ಆರ್‌ಎಸ್‌ಎಸ್‌ ಕಾರ್ಯಕರ್ತ ಸುರೇಶ ಅಂಬಿಗೇರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.