ADVERTISEMENT

ಪರೀಕ್ಷೆ ಕೇಂದ್ರಗಳಿಗೆ ಸಚಿವ ಸುರೇಶ್‌ ಕುಮಾರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 9:48 IST
Last Updated 7 ಮಾರ್ಚ್ 2020, 9:48 IST
   

ಬೆಂಗಳೂರು: ಶಿಕ್ಷಣ ಸಚಿವ.ಎಸ್.ಸುರೇಶ್ ಕುಮಾರ್ಅವರುಬೆಂಗಳೂರು ದಕ್ಷಿಣ ಜಿಲ್ಲೆಯ ವಿವಿಧ ಕಾಲೇಜುಗಳಿಗೆ ಭೇಟಿಪರೀಕ್ಷಾ ನಿರ್ವಹಣೆಯ ಬಗ್ಗೆ ಪರಿಶೀಲಿಸಿ ಮಾಹಿತಿ‌ ಪಡೆದರು.

ಬಿ.ಎಂ.ಎಸ್ ಮಹಿಳಾ ಕಾಲೇಜು, ಬಸವನಗುಡಿಯ ನ್ಯಾಷನಲ್ ಕಾಲೇಜು ಹಾಗೂ‌ ಜಯನಗರದ‌ ವಿಜಯ ಕಾಲೇಜುಗಳಿಗೆ ಭೇಟಿ ನೀಡಿದರು.ಯಾವುದೇ ಅಹಿತಕರ‌ವಾದ ಘಟನೆಯಾಗಿಲ್ಲದಿರುವ ಬಗ್ಗೆ ಮಾಹಿತಿ ಪಡೆದರು.

ದ್ವಿತೀಯ ಪಿಯುಸಿಯ ಕೆಮಿಸ್ಟ್ರಿ, ಬಿಸಿನೆಸ್ ಸ್ಟಡೀಸ್‌ ಹಾಗೂ ಸಮಾಜಶಾಸ್ತ್ರ ಪರೀಕ್ಷೆಗಳು ನಡೆಯುತ್ತಿದ್ದು, ಇಡೀ ಪರೀಕ್ಷಾ ಅವಧಿಯಲ್ಲಿ ಗರಿಷ್ಟಸಂಖ್ಯೆಯ ವಿದ್ಯಾರ್ಥಿಗಳು (ಸುಮಾರು ಆರು ಲಕ್ಷ) ಪರೀಕ್ಷೆ ಎದುರಿಸುತ್ತಿರುವ ಬಗ್ಗೆ ಸಚಿವರು ಮಾಹಿತಿ ಪಡೆದರು.

ADVERTISEMENT

ಇದೇ ಸಂದರ್ಭದಲ್ಲಿ ನ್ಯಾಷನಲ್‌ ಕಾಲೇಜಿನಲ್ಲಿ ಶಿಕ್ಷಣ ತಜ್ಞರಾದ ದಿ.ಎಚ್‌.ನರಸಿಂಹಯ್ಯ ಅವರು ಬಳಸುತ್ತಿದ್ದ ಕೊಠಡಿಗೆ ಭೇಟಿ ನೀಡಿದ ಸಚಿವರು ಅವರೊಂದಿಗಿನ ತಮ್ಮ ಆತ್ಮೀಯ ಒಡನಾಟವನ್ನು‌ ನೆನೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.