ADVERTISEMENT

ಹಿರಿಯ ಪತ್ರಕರ್ತೆ ವಿಜಯಮ್ಮಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 13:07 IST
Last Updated 18 ಡಿಸೆಂಬರ್ 2019, 13:07 IST
ಡಾ. ವಿಜಯಾ
ಡಾ. ವಿಜಯಾ   

ನವದೆಹಲಿ: 2019ನೇಸಾಲಿನಕೇಂದ್ರ ಸಾಹಿತ್ಯ ಅಕಾಡೆಮಿಪ್ರಶಸ್ತಿಯನ್ನು ಬುಧವಾರ ಪ್ರಕಟಿಸಲಾಗಿದ್ದುಹಿರಿಯ ಪತ್ರಕರ್ತೆ ಡಾ.ವಿಜಯಾ ಅವರ ‘ಕುದಿ ಎಸರು’ಕೃತಿ ಆಯ್ಕೆಯಾಗಿದೆ.

ಪ್ರಶಸ್ತಿಯು ₹ 1 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನ ಒಳಗೊಂಡಿದೆ. 2020ರ ಫೆಬ್ರುವರಿ 25ರಂದು ಪ್ರಶಸ್ತಿ ನೀಡಲಾಗುವುದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಮೂವರು ಹಿರಿಯ ಸಾಹಿತಿಗಳಾದ ಬಿ.ಆರ್‌. ಲಕ್ಷ್ಮಣ ರಾವ್‌, ಡಾ. ನಾ. ದಾಮೋದರ ಶೆಟ್ಟಿ, ಡಾ. ಲತಾ ಗುಟ್ಟಿ ಆಯ್ಕೆ ಸಮಿತಿಯಲ್ಲಿ ಇದ್ದರು.

ADVERTISEMENT

ವಿಜಯಮ್ಮ ಎಂದೇ ಚಿರಪರಿಚಿತರಾಗಿರುವ ಡಾ.ವಿಜಯಾ ಅವರು ತಮ್ಮ ಆತ್ಮಕಥನ ‘ಕುದಿ ಎಸರು’ ಪುಸ್ತಕದಲ್ಲಿ ಮನದಲ್ಲಾದ ತಳಮಳಗಳನ್ನು ಭಾವುಕವಾಗಿ ಟಿಪ್ಪಣಿ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಓದುಗರನ್ನು ಸಂವೇದನೆಗೆ ನೂಕುವ ಈ ಪುಸ್ತಕ ಅರಿವನ್ನು ಹುಟ್ಟಿಸುತ್ತದೆ. ಅರಿವು ಮನುಷ್ಯತ್ವದೆಡೆಗೆ ಕೊಂಡೊಯ್ಯುತ್ತದೆ ಎಂದು ವಿಜಯಮ್ಮ ಆಪ್ತವಾಗಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.