ADVERTISEMENT

ಕುಂಬಾರನ ಸಲುವಾಗಿಯಾದರೂ ಕುಂಭ ಮೆರವಣಿಗೆ ಬೇಕು: ಮಲ್ಲಿಕಾ ಘಂಟಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 20:17 IST
Last Updated 23 ಫೆಬ್ರುವರಿ 2019, 20:17 IST
   

ಧಾರವಾಡ: ‘ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕುಂಭ ಮೆರವಣಿಗೆ ನಡೆದರೆ, ಅದು ಪರೋಕ್ಷವಾಗಿ ಕುಂಬಾರರಿಗೆ ನೆರವಾಗಲಿದೆ. ಹೀಗಾಗಿ, ಮಹಿಳೆಯರು ಮಾತ್ರವಲ್ಲ ಪುರುಷರೂ ಕುಂಭವನ್ನು ಹೊರುವಂತಾಗಬೇಕು’ ಎಂದು ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.

ಧಾರವಾಡ ತಾಲ್ಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮಲ್ಲಿ ಬಹಳಷ್ಟು ಕಸುಬುಗಳನ್ನು ನೆಚ್ಚಿಕೊಂಡಿರುವ ಸಣ್ಣ ಸಮುದಾಯಗಳು ಸಂಕಷ್ಟದಲ್ಲಿವೆ. ಮೇಳ, ಸಮ್ಮೇಳನದಂಥ ಕಾರ್ಯಕ್ರಮಗಳಲ್ಲಿ ಇಂಥ ಸಣ್ಣ ಕಸುಬುದಾರರಿಗೆ ಒಂದಷ್ಟು ಕೆಲಸ ಸಿಕ್ಕಲ್ಲಿ, ಅವರ ಬದುಕಿಗೆ ಒಂದು ದಾರಿಯಾಗಲಿದೆ. ಅದರಿಂದ ಆ ಕುಟುಂಬಗಳ ಮಹಿಳೆಯರಿಗೂ ಸಹಾಯವಾಗುತ್ತದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.