ADVERTISEMENT

ಹೆಣ್ಣು ಮಗು ಮಾರಾಟ ಪ್ರಕರಣ: ಹಲವರ ಬಂಧನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 20:08 IST
Last Updated 18 ಜನವರಿ 2020, 20:08 IST

ದಾವಣಗೆರೆ: ಒಂದು ವರ್ಷದ ಹೆಣ್ಣು ಮಗು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರು, ಖರೀದಿಸಿದವರು ಹಾಗೂ ಆಸ್ಪತ್ರೆಯ ಆಯಾ ಸೇರಿ ಏಳು ಜನರನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಂಬೇಡ್ಕರ್‌ ನಗರದ ಕವಿತಾ (26), ಆಕೆಯ ಪತಿ ಮಂಜುನಾಥ (29), ಮಗುವನ್ನು ಖರೀದಿಸಿದ್ದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕುರುಬರಗೇರಿಯ ದಾಕ್ಷಾಯಿಣಿ (34), ರಾಣೆಬೆನ್ನೂರಿನ ಅರೆಮಲ್ಲಾಪುರದ ರವಿ ಅಲಿಯಾಸ್‌ ರವೀಂದ್ರ (49), ರಾಣೆಬೆನ್ನೂರಿನ ಕುರುಬರಗೇರಿಯ ಕರಿಬಸಪ್ಪ (44), ದಾವಣಗೆರೆಯ ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಯ ಆಯಾ ಚಿತ್ರಮ್ಮ (44) ಹಾಗೂ ಮಗುವಿನ ಅಜ್ಜಿ ಕಮಲಮ್ಮ (45) ಬಂಧಿತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT