ADVERTISEMENT

ಟಿಪ್ಪು ಕುರಿತ ಪಠ್ಯ ಕೈಬಿಡದಂತೆ ಸಲೀಂ ಅಹ್ಮದ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 16:22 IST
Last Updated 25 ಮಾರ್ಚ್ 2022, 16:22 IST
ಸಲೀಂ ಅಹ್ಮದ್
ಸಲೀಂ ಅಹ್ಮದ್   

ಬೆಂಗಳೂರು: ಟಿಪ್ಪು ಸುಲ್ತಾನ್‌ ಕುರಿತ ವಿಷಯಗಳನ್ನು ಪಠ್ಯಕ್ರಮ ದಿಂದ ತೆಗೆದುಹಾಕುವ ತೀರ್ಮಾನ ವನ್ನು ಕೈಬಿಡಬೇಕು ಎಂದು ಕಾಂಗ್ರೆಸ್‌ ಸದಸ್ಯ ಸಲೀಂ ಅಹ್ಮದ್‌ ಸರ್ಕಾರವನ್ನು ಒತ್ತಾಯಿಸಿದರು.

ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ಟಿಪ್ಪು ಸುಲ್ತಾನ್‌ ದೂರದೃಷ್ಟಿಯ, ಸರ್ವಧರ್ಮ ಸಹಿಷ್ಣು, ವೈಜ್ಞಾನಿಕ ಮನೋಭಾವದ ಪ್ರಗತಿಪರ ಆಡಳಿತಗಾರರಾಗಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರೊಂದಿಗೆ ಹೋರಾಡುತ್ತಲೇ ರಣಾಂಗಣ ದಲ್ಲಿ ಮಡಿದ ಮೊದಲ ರಾಜ. ಮೈಸೂರು ಹುಲಿ ಎಂದು ಖ್ಯಾತಿ ಪಡೆದಿದ್ದ ಅವರ ಇತಿಹಾಸವನ್ನು ಸಂಪೂರ್ಣವಾಗಿ ಮಕ್ಕಳಿಗೆ ತಿಳಿಸು ವುದು ಸರ್ಕಾರದ ಕರ್ತವ್ಯ’ ಎಂದರು.

‘ಈಗ ಟಿಪ್ಪು ಅವರಿಗೆ ಸಂಬಂಧಿ ಸಿದ ಪಠ್ಯವನ್ನು ಕೈಬಿಡಲಾಗುತ್ತದೆ ಎಂಬ ಚರ್ಚೆ ನಡೆಯುತ್ತಿದೆ. ನಿರ್ದಿಷ್ಟ ಸಮುದಾಯವನ್ನು ಗುರಿ ಯಾಗಿಟ್ಟುಕೊಂಡು ಪಠ್ಯಪುಸ್ತಕ ಪರಿಶೀಲನಾ ಸಮಿತಿ ತಯಾರು ಮಾಡಿರುವ ವರದಿಯನ್ನು ಜಾರಿ ಗೊಳಿಸುವ ನಿರ್ಧಾರವನ್ನು ಬದ ಲಿಸಬೇಕು’ ಎಂದು ಆಗ್ರಹಿಸಿ ದರು.

ADVERTISEMENT

ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ರಿಂದ ಉತ್ತರ ಪಡೆದು ಮಂಡಿಸಲಾಗುವುದು ಎಂದು ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿ ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.