ADVERTISEMENT

ಸಮತಾಸಾಗರ ಮುನಿ ನಿಧನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 18:27 IST
Last Updated 20 ಜನವರಿ 2019, 18:27 IST
ಸಮತಾಸಾಗರ ಮುನಿ
ಸಮತಾಸಾಗರ ಮುನಿ   

ಮೋಳೆ(ಬೆಳಗಾವಿ): ಯಮಸಲ್ಲೇಖನ ವ್ರತ ಕೈಗೊಂಡಿದ್ದ, ಸನ್ಮತಿ ಸಾಗರ ಮುನಿಮಹಾರಾಜರ ಶಿಷ್ಯ ಸಮತಾಸಾಗರ ಮುನಿ ಮಹಾರಾಜರು (84) ಶನಿವಾರ ನಿಧನರಾದರು.

ಕಾಗವಾಡದ ಮಗದುಮ್ ತೋಟದಲ್ಲಿ ಭಾನುವಾರ ಅಂತ್ಯಕ್ರಿಯೆ ನೆರವೇರಿತು.

ಸಮತಾಸಾಗರ ಮುನಿಗಳು ಬೇಡಕಿಹಾಳದವರು. ನಿಪ್ಪಾಣಿಯ ಜೆಐಇ ಬಾಗೇವಾಡಿ ಕಾಲೇಜಿನಲ್ಲಿ ಪ್ರಾಧ್ಯಾಪಕ, ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ್ದರು. 2006ರಲ್ಲಿ ಲೌಕಿಕ ಜೀವನದಿಂದ ವೈರಾಗ್ಯ ಹೊಂದಿ ಸನ್ಮತಿ ಸಾಗರ ಮುನಿಮಹಾರಾಜರಿಂದ ದಿಗಂಬರ ಮುನಿ ದೀಕ್ಷೆ ಪಡೆದುಕೊಂಡು ಸನ್ಯಾಸತ್ವ ಸ್ವೀಕರಿಸಿದ್ದರು. ಕಾಲ್ನಡಿಗೆ ಮೂಲಕ ದೇಶದ ಮೂಲೆಮೂಲೆಗಳ ತೀರ್ಥಕ್ಷೇತ್ರಗಳ ದರ್ಶನ ಪಡೆದಿದ್ದರು. ಜೈನ ಧರ್ಮ ಶಾಸ್ತ್ರಗಳ ಗ್ರಂಥಗಳನ್ನು ರಚಿಸಿದ್ದರು. ಕಾಗವಾಡ-ಮೈಸಾಳ ಗ್ರಾಮಗಳ ಮಧ್ಯದಲ್ಲಿರುವ ಮಹಾವೀರ ಆಶ್ರಮದಲ್ಲಿ 10 ದಿನಗಳಿಂದ ಯಮ ಸಲ್ಲೇಖನ ವ್ರತದಲ್ಲಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.