ADVERTISEMENT

ನಾಳೆಯಿಂದ ಚಿತ್ರಮಂದಿರದಲ್ಲಿ ಶೇ100 ಆಸನಗಳ ಭರ್ತಿಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 10:31 IST
Last Updated 4 ಫೆಬ್ರುವರಿ 2022, 10:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದಲೇ (ಶನಿವಾರ ಫೆ. 5) ಚಿತ್ರಮಂದಿರ ಶೇ 100 ರಷ್ಟು ಆಸನಗಳ ಭರ್ತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಇದಲ್ಲದೇ ಜಿಮ್‌, ಈಜುಕೊಳ, ಯೋಗ ಕೇಂದ್ರಗಳನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭಿಸಬಹುದು ಎಂದು ಮುಖ್ಯಮಂತ್ರಿಯವರ ಜತೆಗಿನ ಸಭೆಯ ಬಳಿಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸುದ್ದಿಗಾರರಿಗೆ ತಿಳಿಸಿದರು.

ಚಲನಚಿತ್ರ ಮಂದಿರಗಳಲ್ಲಿ ಮಾಸ್ಕ್‌ ಕಡ್ಡಾಯವಾಗಿದ್ದು, ಚಿತ್ರಮಂದಿರದ ಒಳಗೆ ತಿಂಡಿ ಮತ್ತು ಪಾನೀಯವನ್ನು ಸೇವಿಸಬಹುದು ಹೊರಗೆ ಹೋಗಲು ಅವಕಾಶವಿಲ್ಲ. ಈ ಎಲ್ಲ ಸ್ಥಳಗಳಿಗೆ ಹೋಗಲು ಎರಡು ಡೋಸ್‌ ಲಸಿಕೆ ಕಡ್ಡಾಯವಾಗಿದೆ. ಕೋವಿಡ್‌ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.