ADVERTISEMENT

ಸಾಣೇಹಳ್ಳಿ: ನಾಟಕೋತ್ಸವ ನ. 1ರಿಂದ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 20:08 IST
Last Updated 26 ಅಕ್ಟೋಬರ್ 2020, 20:08 IST
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ   

ಹೊಸದುರ್ಗ: ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವವನ್ನು ನ.1ರಿಂದ 7ರವರೆಗೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಆಯೋಜಿಸಲಾಗಿದೆ.

‘ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ...’ ಎಂಬ ಧ್ಯೇಯ ವಾಕ್ಯದಡಿ ನಾಟಕೋತ್ಸವ ಆಯೋಜಿಸಲಾಗಿದೆ. ನಿತ್ಯ ವಚನಗೀತೆ, ಚಿಂತನ, ವಿಚಾರ ಮಾಲಿಕೆ, ಕೃತಿ ಲೋಕಾರ್ಪಣೆ, ನಾಟಕ ಪ್ರದರ್ಶನ ಜರುಗಲಿವೆ. ನ.7ರಂದು ನಡೆಯುವ ಸಮಾರೋಪದಲ್ಲಿ ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಕೋವಿಡ್‌–19 ಕಾರಣಕ್ಕೆ ನಾಟಕೋತ್ಸವವನ್ನು ಅಂತರ್ಜಾಲಕ್ಕೆ ಸೀಮಿತಗೊಳಿಸಲಾಗಿದೆ. ಏಳು ದಿನ ನಡೆಯುವ ಕಾರ್ಯಕ್ರಮ www.shivasanchara.org, ಶಿವಸಂಚಾರ–ಸಾಣೇಹಳ್ಳಿ ಫೇಸ್‌ಬುಕ್‌ ಗ್ರೂಪ್‌, ‘ಮತ್ತೆ ಕಲ್ಯಾಣ’ ಫೇಸ್‌ಬುಕ್‌ ಪೇಜ್‌ನಲ್ಲಿ ನೇರ ಪ್ರಸಾರವಾಗಲಿದೆ. ಹೆಚ್ಚಿನ ಮಾಹಿತಿಗೆ 9945561777, 9972007915 ಸಂಪರ್ಕಿಸಬಹುದು ಎಂದು ಶಿವಕುಮಾರ ಕಲಾ ಸಂಘ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.